ಉಜಿರೆ ಗ್ರಾ.ಪಂ. ನಲ್ಲಿ ದೂರದೃಷ್ಟಿ ಯೋಜನೆಯ ಗ್ರಾಮ ಸಭೆ

0


ಉಜಿರೆ :ಉಜಿರೆ ಗ್ರಾಮ ಪಂಚಾಯತ್ ಸುವರ್ಣ ಸೌಧ ಸಭಾಂಗಣದಲ್ಲಿ ದೂರ ದೃಷ್ಟಿ ಯೋಜನೆಯ ಗ್ರಾಮ ಸಭೆ ಜ.2 ರಂದು ಜರುಗಿತು. ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಉಪಾಧ್ಯಕ್ಷ ರವಿ ಕುಮಾರ್ ಬರೆಮೇಲು ವಹಿಸಿದ್ದರು. ಮಾರ್ಗದರ್ಶಿ ಅಧಿಕಾರಿಯಾಗಿ ಪಶು ಸಂಗೋಪನಾ ಇಲಾಖೆಯ ಮುಖ್ಯ ಪಶುವೈದ್ಯಾಧಿಕಾರಿ (ಆಡಳಿತ), ಮಂಜು ನಾಯ್ಕ ಭಾಗವಹಿಸಿ ಸಭೆಯನ್ನು ಮುನ್ನಡೆಸಿದರು.
ಈ ಸಭೆಯಲ್ಲಿ ಅನುವುಗಾರರಾದ ಕು| ಕಾವ್ಯ ದೂರದೃಷ್ಟಿ ಯೋಜನೆಯ ದ್ವಿತೀಯ ದತ್ತಾಂಶದ ವರದಿಯನ್ನು ಸಭೆಗೆ ಮಂಡಿಸಿದರು.


ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ದೂರ ದೃಷ್ಟಿ ಯೋಜನೆಯ ಕುರಿತಾದ ಮಾಹಿತಿಯನ್ನು ಸಭೆಗೆ ನೀಡಿದರು.
ಜಲ ಜೀವನ್ ಮಿಷನ್ ಯೋಜನೆಯ ಸಂಯೋಜಕ ಶಿವರಾಮ್, ಪಂಚಾಯತ್ ಕಾರ್ಯದರ್ಶಿ ಶ್ರವಣ್ ಕುಮಾರ್ ಗ್ರಾಮ ಪಂಚಾಯತ್ ನ ಸದಸ್ಯರುಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪ್ರೇರಣಾ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು,ಪಂಚಾಯತ್ ಸಿಬ್ಬಂದಿಗಳು,ಗ್ರಾಮಸ್ಥರು ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here