ಅಳದಂಗಡಿ: ಸುಲ್ಕೇರಿಮೊಗ್ರು ಶ್ರೀ ಮಹಿಷಮರ್ದಿನಿ ಭಜನಾ ಮಂಡಳಿ ಸುಲ್ಕೇರಿಮೊಗ್ರು ಇದರ ನೇತೃತ್ವದಲ್ಲಿ ನಡೆಯಲಿರುವ ಆಹ್ವಾನಿತ ತಂಡಗಳ ಮಕ್ಕಳ ಕುಣಿತ ಭಜನಾ ಸ್ಪರ್ಧೆಯ ಆಮಂತ್ರಣ ಪತ್ರಿಕೆಯನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರು ಬಿಡುಗಡೆಗೊಳಿಸಿದರು.
ದೇವಸ್ಥಾನದ ಆಡಳಿತ ಮೊಕ್ತೇಸರರಾದ ಎಚ್. ಎಲ್. ರಾವ್. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜೇಂದ್ರ ಸಾಲಿಯಾನ್, ಭಜನಾ ಮಂಡಳಿಯ ಅಧ್ಯಕ್ಷ ಇಂದೂದರ ಕೋಹಿನೂರು, ಕಾರ್ಯದರ್ಶಿ ನಂದನ್ ಕುಮಾರ್, ಕೋಶಾಧಿಕಾರಿ ಪ್ರಕಾಶ್, ತಾಲೂಕು ಯುವ ಮೋರ್ಚಾ ಸದಸ್ಯ ಓಂಕಾರ್ ಜೈನ್, ಆಮಂತ್ರಣದ ವಿಜಯ್ ಕುಮಾರ್ ಜೈನ್ ಭಜನಾ ಮಂಡಳಿಯ ಸದಸ್ಯರಾದ ಅಶ್ವಥ್ ಕುಲಾಲ್, ದಯಾನಂದ, ಅಶ್ವತ್ ವರ್ಪಾಳೆ, ಗೇತನ್ ಮಡಿವಾಳ, ಚoದಯ್ಯ ಮಡಿವಾಳ, ಸುನೀತ ನಾಯಿಜೆ, ಕಿರಣ್ ಕುಮಾರ್ ಜ್ಯೋತಿಕಾ ಸ್ಟುಡಿಯೋ, ಧೀರಜ್ ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.
p>