ಸ.ಪ್ರ.ದ ಕಾಲೇಜು ಬೆಳ್ತಂಗಡಿಯಲ್ಲಿ “ಸಂಬಂಧ ನಿರ್ವಹಣೆ,ಸಮಯ ಮತ್ತು ಅದರ ಪ್ರಾಮುಖ್ಯತೆ ,ನಿರ್ವಹಣೆ ಹಾಗೂ ವ್ಯಕ್ತಿತ್ವ ವಿಕಸನ “ದ ಕುರಿತು ಕಾರ್ಯಕ್ರಮ

0

ಬೆಳ್ತಂಗಡಿ:”ವ್ಯಕ್ತಿತ್ವ ವಿಕಸನಕ್ಕಾಗಿ ನಮ್ಮೊಳಗಿನ ಎಲ್ಲಾ ಸಕಾರಾತ್ಮಕ ಸಾಧ್ಯತೆಗಳನ್ನು ಅರಿಯುವುದು ಅವಶ್ಯವಾಗಿರುತ್ತದೆ.ಒಬ್ಬ ವ್ಯಕ್ತಿ ಸಮಾಜದಲ್ಲಿ ಉತ್ತಮ ವರ್ತನೆಯನ್ನು ಹೊಂದಿರಬೇಕು .ಪ್ರತಿ ಒಬ್ಬನು ಸಮಯದ ಮೌಲ್ಯವನ್ನು ಅರಿಯಬೇಕು.ಸಮಾಜದಲ್ಲಿ ಉತ್ತಮವಾದ ಸಂಬಂಧವನ್ನು ಹೊಂದಿ ಸಮಾಜದ ಅಭಿವೃದ್ಧಿಗೆ ಕಾರಣವಾದ ವ್ಯಕ್ತಿಯಾಗಿ ಹೊರಹೊಮ್ಮಬೇಕು ಎಂದು ಜೆಸಿಐ ವಲಯ ತರಬೇತುದಾರರಾದ ಜೆ. ಯೆಫ್. ಯೆಮ್ ಹೇಮಾವತಿ. ಕೆ ಹೇಳಿದರು.

ಅವರು ಡಿ.15 ರಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿಯಲ್ಲಿ ಮಹಿಳಾ ದೌರ್ಜನ್ಯ ವಿರೋಧಿ ಸಂಘದ ವತಿಯಿಂದ “ಸಂಬಂಧ ನಿರ್ವಹಣೆ,ಸಮಯ ಮತ್ತು ಅದರ ಪ್ರಾಮುಖ್ಯತೆ ,ನಿರ್ವಹಣೆ ಹಾಗೂ ವ್ಯಕ್ತಿತ್ವ ವಿಕಸನ “ದ ಕುರಿತು ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಕಾಲೇಜಿನ ಪ್ರಾಂಶುಪಾಲಡಾ. ಸುಬ್ರಹ್ಮಣ್ಯ ಕೆ ವಹಿಸಿ ಅಧ್ಯಕ್ಷೀಯ ನೆಲೆಯಲ್ಲಿ ಕಾರ್ಯಕ್ರಮದ ಕುರಿತು ಮಾತನಾಡಿದರು. ಸುಚಿತ್ರ ಪ್ರಥಮ ಎಂಕಾಮ್ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.ಮಹಿಳಾ ದೌರ್ಜನ್ಯ ವಿರೋಧಿ ಸಂಘದ ಸಂಚಾಲಕರಾದ ಡಾ.ಚಂದ್ರಾವತಿ ಅವರು ಸ್ವಾಗತವನ್ನು ಕೋರಿದರು.ಕಾರ್ಯಕ್ರಮದ ಕೊನೆಯ ಭಾಗದಲ್ಲಿ ವಂದನಾ l ಎಂಕಾಮ್ ಅವರು ಧನ್ಯವಾದಗಳನ್ನು ಅರ್ಪಿಸಿದರು.

p>

LEAVE A REPLY

Please enter your comment!
Please enter your name here