ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಬಂದಾರು ಗ್ರಾ.ಪಂ ಸಿಬ್ಬಂದಿ ಲಲಿತಾ ರವರ ಮಕ್ಕಳಿಗೆ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘದಿಂದ ರೂ.1.05 ಲಕ್ಷದ ಕಿಸಾನ್ ವಿಕಾಸ್ ಚೆಕ್ ಹಸ್ತಾಂತರ

0

ಬಂದಾರು: ಬಂದಾರು ಗ್ರಾಮ ಪಂಚಾಯಿತಿನಲ್ಲಿ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಶ್ರೀಮತಿ ಲಲಿತ ರವರು ಕಿಡ್ನಿ ವೈಫಲ್ಯದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಸದ್ರಿ ಪಂಚಾಯಿತಿ ಸಿಬ್ಬಂದಿಯು ಗ್ರಾಮ ಪಂಚಾಯತಿಯಲ್ಲಿ ಕನಿಷ್ಠ ವೇತನಕ್ಕೆ ದುಡಿಯುತ್ತಿದ್ದು ಅವರಿಗೆ ಯಾವುದೇ ಆರೋಗ್ಯ ಭದ್ರತೆ ಆಗಲಿ ಸೇವಾ ಭದ್ರತೆ ಆಗಲಿ ಇಲ್ಲದೆ ಕರ್ತವ್ಯ ನಿರ್ವಹಿಸುತ್ತಿದ್ದು ಹಾಗೂ ಬಡ ಕುಟುಂಬದವರಾಗಿದ್ದು ಆರ್ಥಿಕವಾಗಿ ಹಿಂದುಳಿದಿರುವುದರಿಂದ ಆಸ್ಪತ್ರೆಯ ಖರ್ಚನ್ನು ಭರಿಸಲು ಅಸಾಧ್ಯವಾಗಿರುತ್ತದೆ.

ಸೂಕ್ತ ಚಿಕಿತ್ಸೆಯನ್ನು ಪಡೆಯಲಾಗದೆ ಅರೋಗ್ಯ ಪೂರ್ಣ ಜೀವನಕ್ಕಾಗಿ ಹೋರಾಡುತ್ತಿದ್ದ ಅವರಿಗೆ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘ ತಾಲೂಕು ಸಮಿತಿ ಬೆಳ್ತಂಗಡಿಯ ಗ್ರಾಮ ಪಂಚಾಯಿತಿ ನೌಕರರು ಪಂಚಾಯತಿಯಲ್ಲಿ ದುಡಿದ ಕನಿಷ್ಠ ವೇತನದಲ್ಲಿ 1,05,000 ಮೌಲ್ಯದ ಕಿಸಾನ್ ವಿಕಾಸ್ ಪತ್ರ ಚೆಕ್ಕನ್ನು ಶ್ರೀಮತಿ ಲಲಿತಾರವರ ಮಕ್ಕಳಾದ ಸ್ವಸ್ತಿಕ್(ಪ್ರಾಯ:07 ವರ್ಷ) ಸಾಕ್ಷಿತ್ (ಪ್ರಾಯ:3.5 ವರ್ಷ) ಹೆಸರಿನಲ್ಲಿ ವಿತರಿಸಲಾಯಿತು. ಸರಕಾರದ ಮಟ್ಟದಲ್ಲಿ ಕನಿಷ್ಠ ವೇತನಕ್ಕೆ ಆರೋಗ್ಯ ಭದ್ರತೆ ಸೇವಾ ಭದ್ರತೆ ಇಲ್ಲದೆ ದುಡಿಯುತ್ತಿರುವ ಗ್ರಾಮ ಪಂಚಾಯಿತಿ ನೌಕರರ ಪರಿಸ್ಥಿತಿ ಶೋಚನೀಯವಾಗಿದೆ.

ಈ ಸಂದರ್ಭದಲ್ಲಿ ಬೆಳ್ತಂಗಡಿ ಲಯನ್ಸ್ ಕ್ಲಬ್ ನ ಅಧ್ಯಕ್ಷರು, ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಶ್ರೇಯೋಭಿವೃದ್ಧಿ ಸಂಘದ ರಾಜ್ಯದ್ಯಕ್ಷರಾದ ಲ.ಡಾ. ದೇವಿ ಪ್ರಸಾದ್ ಬೊಳ್ಮ ಹಾಗೂ ತಾಲೂಕು ಸಮಿತಿ ಅಧ್ಯಕ್ಷರು, ಕಾರ್ಯದರ್ಶಿ, ಪದಾಧಿಕಾರಿಗಳು ಹಾಗೂ ಬಂದಾರು ಗ್ರಾಮ ಪಂಚಾಯತಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here