ಉಜಿರೆ: ಅರೆಭಾಷೆ ದಿನಾಚರಣೆ ಪ್ರಯುಕ್ತ ಉಜಿರೆಯ ಸಂಜೀವಿನಿ ಸಭಾಂಗಣದಲ್ಲಿ ಡಿ.11ರಂದು ಒಳಾಂಗಣ ಸ್ಪರ್ಧೆಗಳನ್ನು ನಡೆಸಲಾಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಸುಬ್ರಮಣ್ಯದ ಕುಕ್ಕೆ ಶ್ರೀ ಪದವಿ ಕಾಲೇಜಿನ ಗ್ರಂಥಪಾಲಕಿಯಾದ ಸುನಿತಾ ಅಶೋಕ ಗೌಡ ನೆರವೇರಿಸಿದರು.
ವೇದಿಕೆಯಲ್ಲಿ ಬೆಳ್ತಂಗಡಿ ತಾಲೂಕಿನ ಅರೆ ಭಾಷೆ ಅಭಿಮಾನಿಗಳ ಸಂಘದ ಅಧ್ಯಕ್ಷೆ ಲೋಕೇಶ್ವರಿ ವಿನಯ ಚಂದ್ರ ಅಧ್ಯಕ್ಷತೆ ವಹಿಸಿ ತಾಲೂಕಿನ ವಿವಿಧ ಕಡೆ ಇರುವ ಎಲ್ಲಾ ಅರೆಭಾಷಿಗರು ಈ ಸಂಘದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಸಂಘವನ್ನು ಬೆಳೆಸಬೇಕು ಎಂದು ಶುಭ ನುಡಿದರು. ಹಾಗೂ ಉಜಿರೆ ಗೌಡರ ಯಾನೆ ಒಕ್ಕಲಿಗರ ಗ್ರಾಮ ಸಮಿತಿಯ ಗೌರವಾಧ್ಯಕ್ಷ ಪ್ರಕಾಶ್ ಗೌಡ ಅಪ್ರಮೇಯ ಶುಭ ಕೋರಿದರು. ವೇದಿಕೆಯಲ್ಲಿ ಕೋಶಾಧಿಕಾರಿ ಆನಂದ ಗೌಡ ಉಪಾಧ್ಯಕ್ಷ ಧರ್ಮೇಂದ್ರ ಕುಮಾರ್ ಬೆಳಾಲು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಕ್ಕಳಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಹಾಗೂ ಪುರುಷರಿಗೆ ಮತ್ತು ಮಹಿಳೆಯರಿಗೆ ಲಕ್ಕಿ ಗೇಮ್ , ಆಶುಭಾಷಣ, ಹಾಸ್ಯನಟನೆ ಹಾಗೂ ಇನ್ನಿತರ ಸ್ಪರ್ಧೆಗಳನ್ನು ನಡೆಸಲಾಯಿತು.
ಗಣ್ಯರಾದ ರಮೇಶ್ ಗೌಡ, ರಾಜೇಶ್ ಗೌಡ, ಆನಂದ ಕೃಷ್ಣ, ಕೋಮಲಚಂದ್ರ, ಹರಿಶ್ಚಂದ್ರ, ಪ್ರಕಾಶ್ ಗೌಡ, ರವಿಚಂದ್ರ ಪೆರ್ಮುದೆ, ಶೀಲಾವತಿ ಧರ್ಮೇಂದ್ರ ಗೌಡ, ವಿದ್ಯಾ ಶ್ರೀನಿವಾಸ್ ಗೌಡ, ಕಮಲಾಕ್ಷಿ, ಬಿಂದು ಸವಿತ ಜಯದೇವ್, ಪೂರ್ಣಿಮಾ, ದೇವಮ್ಮ, ಹರ್ಷಲತಾ ಜಯಶ್ರೀ ಅಪ್ರಮೇಯ ಇನ್ನಿತರ ಗಣ್ಯರು ಭಾಗವಹಿಸಿದ್ದರು. ಧರ್ಮೇಂದ್ರ ಕುಮಾರ್ ಬೆಳಾಲು ಕಾರ್ಯಕ್ರಮ ನಿರೂಪಿಸಿದರು.