ಮಚ್ಚಿನ: ಮಚ್ಚಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳ ಮಕ್ಕಳ ಸಾಂಸ್ಕೃತಿಕ ಸಂಭ್ರಮ 2022 ತಾರೆಮಾರು ಅಂಗನವಾಡಿ ಕೇಂದ್ರದಲ್ಲಿ ಡಿ.10 ರಂದು ನಡೆಯಿತು.
ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಮುತ್ತಮ್ಮ ಇವರು ನೆರವೇರಿಸಿದರು.ಅಧ್ಯಕ್ಷತೆಯನ್ನು ತಾರೆಮಾರು ಅಂಗನವಾಡಿ ಕೇಂದ್ರದ ಪುಟಾಣಿ ರಾಶಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಗ್ರಾ.ಪಂ ಅಧ್ಯಕ್ಷ ಚಂದ್ರಕಾಂತ್ ನಿಡ್ಡಾಜೆ, ಸದಸ್ಯರಾದ ಸೋಮಾವತಿ, ರುಕ್ಮಿಣಿ ತಾರ, ಉಪಾಧ್ಯಾಯರಾದ ಡೀಕಮ್ಮ, ದಿನೇಶ್, ಗ್ರಾಮದ ಹಿರಿಯರಾದ ಸಂಜೀವ, ಡೀಕಯ್ಯ ಗೌಡ, ಬಾಬು, ಮಹಿಳಾ ಮತ್ತು ಕಲ್ಯಾಣ ಇಲಾಖೆ ಮೇಲ್ವಿಚಾರಕರಾದ ಸುಮನ, ಸಿಆರ್ ಪಿ ಚೇತನ, ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಮಲ್ಲಿಕಾ ಇವರು ಉಪಸ್ಥಿತರಿದ್ದರು. ಮಕ್ಕಳಿಗೆ ವಿವಿಧ ಸ್ಪರ್ಧೆಗಳು ಹಾಗೂ ಕ್ರೀಡಾಕೂಟವನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯ ತೀರ್ಪುಗಾರರಾಗಿ ಲೀನಾ ಸೇರಾವೊ, ಚೇತನ ಇವರು ನಿರ್ವಹಿಸಿದರು. ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಸಮಗ್ರ ಟ್ರೋಫಿ ಮಚ್ಚಿನ ಗ್ರಾಮದ ತಾರೆಮಾರು ಅಂಗನವಾಡಿ ಪಡೆದುಕೊಂಡಿತು. ಈ ಕಾರ್ಯಕ್ರಮದ ಸಂಪೂರ್ಣ ುಸ್ತುವಾರಿಯನ್ನು ಗ್ರಾ.ಪಂ ಅಧ್ಯಕ್ಷರಾದ ಚಂದ್ರಕಾಂತ ನಿಡ್ಡಾಜೆ ವಹಿಸಿದ್ದರು. ಇವರಿಗೆ ಎಲ್ಲಾ ಅಂಗನವಾಡಿ ವತಿಯಿಂದ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಅಂಗನವಾಡಿಗಳ ಕಾರ್ಯಕರ್ತೆಯರು, ಸಹಾಯಕಿಯರು, ಬಾಲವಿಕಾಸ ಸಮಿತಿ ಅಧ್ಯಕ್ಷರುಗಳು, ಆಶಾಕಾರ್ಯಕರ್ತೆಯರು, ಆರೋಗ್ಯ ಸಹಾಯಕಿ ಜಯಲಕ್ಷ್ಮಿ, ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.
ಮಚ್ಚಿನ ಾರೋಗ್ಯ ಸಹಾಯಕಿ ಲೋಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ಚಂದ್ರಕಾಂತ್ ಸ್ವಾಗತಿಸಿದರು. ತಾರೆಮಾರು ಅಂಗನವಾಡಿ ಕಾರ್ಯಕರ್ತೆ ಪುಷ್ಪ ವಂದಿಸಿದರು.