ಬೆಳ್ತಂಗಡಿ: ಪ್ರತಿಷ್ಠಿತ ಜೆಸಿಐ ಬೆಳ್ತಂಗಡಿ ಮಂಜುಶ್ರೀಯ 2023 ನೇ ಸಾಲಿನ ನೂತನ ಅಧ್ಯಕ್ಷರಾಗಿ ವಾಣಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ, ಯುವ ಸಂಘಟಕ ಶಂಕರ್ ರಾವ್ ಬೆಳ್ತಂಗಡಿ ನಿಯೋಜನೆಗೊಂಡಿದ್ದಾರೆ.
ಸುಮಾರು 45 ವರ್ಷಗಳಿಂದ ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬಂದಿರುವ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಸಂಸ್ಥೆಯು ವಲಯದಲ್ಲಿಯೇ ಅತ್ಯಂತ ಹಿರಿಯ ಸಂಸ್ಥೆ. ತಾಲೂಕಿಗೆ ಹಲವಾರು ನಾಯಕರನ್ನು ಕೊಡುಗೆ ನೀಡಿದೆ. ರಾಜ್ಯದ ಸಾವಿರಾರು ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿದ ಜೇಸಿ ಸಂಸ್ಥೆಯ ಪದಾಧಿಕಾರಿಗಳ ಆಯ್ಕೆಯು ಇತ್ತೀಚೆಗೆ ನಡೆಯಿತು.
ನೂತನ ವರ್ಷಕ್ಕೆ ನಿಕಟಪೂರ್ವಧ್ಯಕ್ಷರಾಗಿ ಪ್ರಸಾದ್ ಬಿ.ಎಸ್, ಕಾರ್ಯದರ್ಶಿಗಳಾಗಿ ಸುಧೀರ್ ಕೆ. ಎನ್,ಕೋಶಾಧಿಕಾರಿಯಾಗಿ ಸುಧೀರ್ ಜೈನ್, ಮಹಿಳಾ ಜೆಸಿ ಸಂಯೋಜಕಿಯಾಗಿ ಮಮಿತಾ ಸುಧೀರ್, ಬಿಸಿನೆಸ್ ವಿಭಾಗದ ಉಪಾಧ್ಯಕ್ಷರಾಗಿ, ಶೀತಲ್ ಜೈನ್, ಟ್ರೈನಿಂಗ್ ವಿಭಾಗದ ಉಪಾಧ್ಯಕ್ಷರಾಗಿ ಹೇಮಾವತಿ ಕೆ, ಘಟಕ ಉಪಾಧ್ಯಕ್ಷರಾಗಿ ರಂಜಿತ್ ಹೆಚ್.ಡಿ,ಕಮ್ಯೂನಿಟಿ ಡೆವಲಪ್‌ಮೆಂಟ್ ವಿಭಾಗದ ಉಪಾಧ್ಯಕ್ಷರಾಗಿ ಆಶಾಲತಾ ಪ್ರಶಾಂತ್ ಹಾಗೂ ಮಾರ್ಕೆಟಿಂಗ್ ವಿಭಾಗದ ಉಪಾಧ್ಯಕ್ಷರಾಗಿ ರಕ್ಷಿತ್ ಅಂಡಿಂಜೆ ಆಯ್ಕೆಯಾದರು.
ಜೂನಿಯರ್ ಜೆಸಿ ಅಧ್ಯಕ್ಷರಾಗಿ ರಾಮಕೃಷ್ಣ ಶರ್ಮಾ, ಕಾರ್ಯದರ್ಶಿಯಾಗಿ ಶೃತನ್, ಮಹಿಳಾ ಜೇಸಿ ನಿರ್ದೇಶಕರಾಗಿ ಸುಭಾಷಿಣಿ ,ರಕ್ಷಿತಾ ಶೆಟ್ಟಿ, ಕಾರ್ಯಕ್ರಮ ನಿರ್ದೇಶಕರಾಗಿ ಚಂದ್ರಹಾಸ ಬಳಂಜ,ಜೂನಿಯರ್ ಜೆಸಿ ಸಂಯೋಜಕರಾಗಿ ವಿನಾಯಕ ಪ್ರಸಾದ್,ಪ್ರೇಮನಾಥ ಶೆಟ್ಟಿ, ಮೀಡಿಯಾ ಕವರೇಜ್ ನಿರ್ದೇಶಕರಾಗಿ ಗಣೇಶ್ ಬಿ ಶಿರ್ಲಾಲು,ಅರಿಹಂತ್ ಜೈನ್,ಸೋಷಿಯಲ್ ಮೀಡಿಯಾ ನಿರ್ದೇಶಕರಾಗಿ ಅನುದೀಪ್ ಜೈನ್,ದಾಮೋದರ್,ಬೆಳವಣಿಗೆ ಮತ್ತು ಅಭಿವೃದ್ಧಿ ನಿರ್ದೇಶಕರಾಗಿ ವಿಜಯ್ ನಿಡಿಗಲ್,ರತೀಶ್ ರಾವ್,ಸ್ಪೆಷಲ್ ಪ್ರಾಜೆಕ್ಟ್ ಗುರುರಾಜ್ ಗುರಿಪಳ್ಳ ,ವಿಶಾಲ್ ಆಗಸ್ಟಿನ್,ಎಂಪವರಿಂಗ್ ಯೂತ್ ನಿರ್ದೇಶಕರಾಗಿ ಸ್ಮಿತೇಶ್ ಎಸ್ ಬಾರ್ಯ,ದೀಕ್ಷಾ ಗಣೇಶ್,ಸಾಂಸ್ಕೃತಿಕ ನಿರ್ದೇಶಕರಾಗಿ ಜಿತೇಶ್ ಅರೋಲಿನ್ ಡಿಸೋಜ, ಇವೆಂಟ್ ಪ್ರಮೋಟರ್ ಗಳಾಗಿ ಉದಯ ಬಂಗೇರ,ಸುಶೀಲ್ ಎಸ್,ಗಣೇಶ್ ಚಾರ್ಮಾಡಿ,ಸ್ಪೋರ್ಟ್ಸ್ ಸಂಯೋಜಕರಾಗಿ ಜಯರಾಜ್ ನಡಕರ,ದೀಪಕ್ ಹೆಚ್.ಡಿ,ಕಾನೂನು ಸಲಹೆಗಾರ ಪ್ರಶಾಂತ್ ಎಂ ಆಯ್ಕೆಯಾಗಿದ್ದಾರೆ.