



ಉಜಿರೆ: ಶ್ರೀ ಧ. ಮಂ. ವಸತಿ ಪದವಿ ಪೂರ್ವ ಕಾಲೇಜಿನ ಟೆಕ್ನೋ ಕ್ಲಬ್ ಹಾಗೂ ಗಣಕಶಾಸ್ತ್ರ ವಿಭಾಗದಿಂದ ವಿದ್ಯಾರ್ಥಿಗಳನ್ನು ಉಜಿರೆಯ ಮಂಜುಶ್ರೀ ಮುದ್ರಣಾಲಯಕ್ಕೆ ಕರೆದೊಯ್ಯಲಾಯಿತು. ಮುದ್ರಣ ಯಂತ್ರಗಳು ಕಾರ್ಯನಿರ್ವಹಿಸುವ ವೈಖರಿಯನ್ನು ವಿದ್ಯಾರ್ಥಿಗಳಿಗೆ ವಿವರಿಸಲಾಯಿತು. ಮುದ್ರಣಾಲಯದ ತಾಂತ್ರಿಕ ವ್ಯವಸ್ಥೆ, ಆಡಳಿತ ವ್ಯವಸ್ಥೆ ಹಾಗೂ ಶಿಸ್ತುಬದ್ಧವಾದ ಕಾರ್ಯನಿರ್ವಹಿಸುವ ಕ್ರಮಗಳನ್ನು ವಿದ್ಯಾರ್ಥಿಗಳು ವೀಕ್ಷಿಸಿದರು. ಮುದ್ರಣಾಲಯದ ಸಿಬ್ಬಂದಿಗಳು ವಿದ್ಯಾರ್ಥಿಗಳಿಗೆ ವಿಷಯ ವಿವರಿಸುವಲ್ಲಿ ಸಹಕರಿಸಿದರು.


ಟೆಕ್ನೋ ಕ್ಲಬ್ ನ ಸಂಯೋಜಕರು ಹಾಗೂ ಕಾಲೇಜಿನ ಗಣಕ ಶಾಸ್ತ್ರ ವಿಭಾಗದ ಉಪನ್ಯಾಸಕ ಪವಿತ್ರ ಕುಮಾರ್ ಉಪಸ್ಥಿತರಿದ್ದರು. ಕಾಲೇಜಿನ ಬೋಧಕ ಸಿಬ್ಬಂದಿಗಳು ಜೊತೆಗಿದ್ದು ಸಹಕರಿಸಿದರು.









