




ಉಜಿರೆ: ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಉಪಾಧ್ಯಕ್ಷರಾದ ವೀರಾಂಗಣ ಡಿ. ಅನಿತಾ ಸುರೇಂದ್ರ ಕುಮಾರ್ ಅವರ ಪರಿಕಲ್ಪನೆಯ, ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಡಿ. ಸುರೇಂದ್ರ ಕುಮಾರ್ ಅವರ ಮಾರ್ಗದರ್ಶನದಲ್ಲಿ ಬಜಗೋಳಿಯ ಸುಮ್ಮಗುತ್ತುವಿನಲ್ಲಿ ನಡೆದ ಭಾರತೀಯ ಜೈನ್ ಮಿಲನ್ ವಲಯ 8ರ 9ನೇ ಆವೃತ್ತಿಯ ಮಂಗಳೂರು ವಿಭಾಗ ಮಟ್ಟದ ಜಿನ ಭಜನಾ ಸ್ಪರ್ಧೆಯಲ್ಲಿ ಕಿರಿಯರ ವಿಭಾಗದಲ್ಲಿ ಉಜಿರೆಯ ಹರ್ಷದಾ ತಂಡ ನಾಲ್ಕನೇ ಸ್ಥಾನ ಹಾಗೂ ಬ್ರಾಹ್ಮರಿ ತಂಡ ದ್ವಿತೀಯ ಸ್ಥಾನ ಪಡೆದಿರುತ್ತಾರೆ ಈ ತಂಡದಲ್ಲಿ ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯ ವಿದ್ಯಾರ್ಥಿಗಳು ಅನಿಕ ಜೈನ್, ಶುಕ್ತಿ ಜೈನ್, ಅದ್ವಿತಿ ಜೈನ್ ಹಾಗೂ ದೀಪ್ತಾ ಜೈನ್ ಭಾಗವಹಿಸಿ ಜನವರಿಯಲ್ಲಿ ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.


ಉಜಿರೆಯ ತೃಪ್ತ ಕುಮಾರ್ ಜೈನ್ ಸಂಯೋಜಿಸಿದ ವಿಜೇತ ಜಿನಭಜನಾ ತಂಡಗಳಿಗೆ ಸೋನಿಯಾ ಯಶೋವರ್ಮ ಅವರು ಮಾರ್ಗದರ್ಶನ ನೀಡಿ, ಅಭಿನಂದಿಸಿರುತ್ತಾರೆ.
ಶಾಲೆಯಿಂದ ವಿಜೇತರಾದ ವಿದ್ಯಾರ್ಥಿಗಳನ್ನು ಶಾಲಾ ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದಿಂದ ಅಭಿನಂದಿಸಲಾಯಿತು.









