




ಉಜಿರೆ: ಮೂರ್ತೆದಾರರ ಸಹಕಾರ ಸಂಘದ ವತಿಯಿಂದ ಸಂಘದ ಸದಸ್ಯ ಪ್ರತಿಭಾವಂತ 15 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಡಿ. 7ರಂದು ಸಂಘದ ಸಭಾ ಭವನದಲ್ಲಿ ನಡೆಯಿತು.




ಸಂಘದ ಅಧ್ಯಕ್ಷ ವಿಶ್ವನಾಥ ಕೊಲ್ಲಾಜೆ ವಿದ್ಯಾರ್ಥಿ ವೇತನ ವಿತರಿಸಿದರು. ಉಪಾಧ್ಯಕ್ಷ ಸೀತಾರಾಮ ವಿ. ತೋಟತ್ತಾಡಿ, ನಿರ್ದೇಶಕರಾದ ನೊಣಯ್ಯ ಪೂಜಾರಿ, ಸೇಸಪ್ಪ ಪೂಜಾರಿ ಉಪ್ಪಾರು, ಸೂರಪ್ಪ ಪೂಜಾರಿ ಬೆಳಾಲು, ಹರೀಶ್ ಸುವರ್ಣ ಕನ್ಯಾಡಿ, ತುಕಾರಾಮ ಸಾಲಿಯಾನ್ ಆರ್ಲ, ನವೀನಚಂದ್ರ ಕೆ. ಎ., ವಸಂತ ಎಂ, ವ್ಯವಸ್ಥಾಪಕ ಪ್ರಮೋದ್ ಕುಮಾರ್, ಸಿಬ್ಬಂದಿ ಪುರುಷೋತ್ತಮ, ಸಂಘದ ಸದಸ್ಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.









