ಉಜಿರೆ: ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ

0

ಉಜಿರೆ: ಶ್ರೀ ರಾಮ ವಿದ್ಯಾಸಂಸ್ಥೆ ಕಲ್ಲಡ್ಕದಲ್ಲಿ ನಡೆದ “ಅಟಲ್ ಟಿಂಕರ್ ಫೆಸ್ಟ್ 2025” ಅಂಗವಾಗಿ ಅಂತರ ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಅರ್ವಿನ್ ಎ. ಶೆಟ್ಟಿ, ಮೆಲ್ರಿಕ್ ಡಿಯೋನ್ ಕ್ರಾಸ್ತ, ನಿನಾದ್ ಅನಂತ್ ದ್ವಿತೀಯ ಸ್ಥಾನ, ವಿಜ್ಞಾನ ಮಾದರಿ ತಯಾರಿ ಸ್ಪರ್ಧೆಯಲ್ಲಿ ಶಯನ್ ಆರ್. ಜಿ., ಸಿದ್ಧಾಂತ್ ಜೈನ್ ದ್ವಿತೀಯ ಸ್ಥಾನ, ಗಣಿತ ಪಝಲ್ ಸ್ಪರ್ಧೆಯಲ್ಲಿ ಪೃಥ್ವಿ ಎಸ್ ಶೆಟ್ಟಿ ಹಾಗೂ ಶ್ರೇಯ ಕೆ. ಗೌಡ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ವಿಜೇತರಾದ ವಿದ್ಯಾರ್ಥಿಗಳನ್ನು ಹಾಗೂ ಭಾಗವಹಿಸಿದ ವಿದ್ಯಾರ್ಥಿಗಳನ್ನು ಶಾಲಾ ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದಿಂದ ಅಭಿನಂದಿಸಲಾಯಿತು.

LEAVE A REPLY

Please enter your comment!
Please enter your name here