ನೆಕ್ಕಿಲು: ಶಾಲಾ ಮುಖ್ಯ ಶಿಕ್ಷಕರ ಬೀಳ್ಕೊಡುಗೆ

0

ಬೆಳ್ತಂಗಡಿ: ತಾಲೂಕಿನ ಉರುವಾಲು ಗ್ರಾಮದ ನೆಕ್ಕಿಲು ದ.ಕ. ಜಿ.ಪಂ. ಕಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕ ದಕ್ಷಿಣ ಕನ್ನಡ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಬಿ. ಎಸ್. ಬಿರಾದಾರ್ ಅವರ ಬೀಳ್ಕೊಡುಗೆ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಿತು.

ಈ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ಅಬ್ದುಲ್ ಶರೀಫ್ ವಹಿಸಿದ್ದರು. ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೀತಾರಾಮ್ ಮಡಿವಾಳ ಮಾತನಾಡುತ್ತಾ ಬಿರಾದಾರ್ ಒಬ್ಬರು ಈ ಶಾಲೆಯಲ್ಲಿ 21 ವರ್ಷ ಶಿಕ್ಷಕರಾಗಿ ಅನುಪಮಾ ಸಾಧನೆ ಮಾಡಿ ಊರವರ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದಾರೆ ಎಂದರು.

ವೇದಿಕೆಯಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಪ್ರಭಾಕರ ಹೆಗ್ಡೆ, ಮಸೀದಿಯ ಮುಖ್ಯ ಗುರು ಉಮರುಲ್ ಫಾರೂಕ್ ಸಖಾಫಿ, ಊರ ದಾನಿಗಳಾದ ಪದ್ಮನಾಭ ಶಿಲ್ಪಿಗಳು, ನಿರುಪಮ ಎಸ್.ಆಳ್ವ, ಕಾಸಿಮ್ ಬಳ್ಳಿ, ಹನೀಫ್ ಮಿಸ್ಟಾಯಿ, ಗ್ರಾ.ಪಂ. ಸದಸ್ಯೆ ಸುಮತಿ ಜನಾರ್ಧನ, ಮಾಜಿ ಎಸ್.ಡಿ.ಎಂ.ಸಿ ಸದಸ್ಯರಾದ ಜಯರಾಮ ನಾಯ್ಕ, ಜನಾರ್ದನ ನಾಯ್ಕ, ವಾಸಪ್ಪ ಗೌಡ, ಮೈರೋಳ್ತಡ್ಕ ಶಾಲೆಯ ಮುಖ್ಯ ಶಿಕ್ಷಕಿ ಚಂದ್ರವತಿ, ಸಿ.ಆರ್.ಪಿ, ಮೊಹಮ್ಮದ್ ಶರೀಫ್ ಕೆ.ಸಿ., ಮಾಜಿ ಸಿ.ಆರ್.ಪಿ. ಸಂಧ್ಯಾ, ಕುಪ್ಪೆಟ್ಟಿ ಶಾಲಾ ಮುಖ್ಯ ಶಿಕ್ಷಕಿ ವನಿತ, ಪುತ್ತಿಲ ಮುಖ್ಯ ಶಿಕ್ಷಕ ಶಿವಸ್ವಾಮಿ, ಪಿಲಿಗೂಡು ಶಾಲಾ ಮುಖ್ಯ ಶಿಕ್ಷಕಿ ಚಂದ್ರಕ್ಕಿ, ಪಂಚಾಯತ್ ಮಾಜಿ ಸದಸ್ಯ ಅಬ್ದುಲ್ ಸುಕುರು, ಸಮಾಜ ಸೇವಕ ತಣ್ಣೀರುಪಂತ ಸಿ.ಎ ಬ್ಯಾಂಕ್ ನಿರ್ದೇಶಕ ಸುರೇಶ್ ಎಚ್. ಎಲ್. ಉಪಸ್ಥಿತರಿದ್ದರು.

ಚಂದ್ರಕ್ಕಿ ಬಿರಾದಾರ್ ಶಿಕ್ಷಕ ದಂಪತಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಊರಿನ ಗಣ್ಯರಾದ ಯಶೋಧರ ಎಚ್., ಸುಂದರಿ, ಭಾರತಿ ಕೆ. ಹಾಗೂ ಎಸ್.ಡಿ.ಎಂ.ಸಿ ಸದಸ್ಯರು, ಪೋಷಕರು, ಹಳೆ ವಿದ್ಯಾರ್ಥಿಗಳು, ಕುಪ್ಪೆಟ್ಟಿ ಮತ್ತು ಕರಾಯ ಕ್ಲಸ್ಟರ್ ನ ಶಿಕ್ಷಕರು ಉಪಸ್ಥಿತರಿದ್ದರು.

ಶಾಲಾ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಮುಖ್ಯ ಶಿಕ್ಷಕಿ ಸಂಧ್ಯಾರಾಣಿ ಕೆ. ಪ್ರಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಕಾರ್ಯಕ್ರಮವನ್ನು ಸಹ ಶಿಕ್ಷಕಿ ಲೀಲಾವತಿ ಡಿ. ಎಸ್. ನಿರೂಪಿಸಿ, ಗೌರವ ಶಿಕ್ಷಕಿ ವಿನಯ ವಂದನಾರ್ಪಣೆಗೈದರು.

LEAVE A REPLY

Please enter your comment!
Please enter your name here