




ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಬೆಳ್ತಂಗಡಿ ಉಪ ವಿಭಾಗ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮಾಸಿಕ ಸಭೆ ಡಿ.1 ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಬೆಳ್ತಂಗಡಿ ಉಪ ವಿಭಾಗ ಉಪ ಅಧೀಕ್ಷಕ ರೋಹಿಣಿ ಸಿ.ಕೆ. ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯ ಬೆಳ್ತಂಗಡಿ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಸುಬ್ಬಾಪುರ್ ಮಠ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಧೀರಜ್ ಕುಮಾರ್ ಉಪಸ್ಥಿತರಿದ್ದರು.
ಸಾಮಾಜಿಕ ಹೋರಾಟಗಾರ ಶೇಖರ್ ಲಾಯಿಲ ಮಾತನಾಡಿ ಬೆಳ್ತಂಗಡಿ ಪೊಲೀಸ್ ಉಪ ವಿಭಾಗಯಾಗಿದ್ದು ಖುಷಿಯ ವಿಷಯ. ಆದರೆ ಕೆಲವೊಂದು ವ್ಯಕ್ತಿಗಳು ಬೆಳ್ತಂಗಡಿ ಉಪ ವಿಭಾಗವನ್ನು ರದ್ದು ಮಾಡಲು ಪಿತೂರಿ ನಡೆಸುತ್ತಿದ್ದಾರೆ. ಅದರಲ್ಲದೆ ಪತ್ರಿಕಾಗೋಷ್ಠಿ ನಡೆಸಿ ಉಪ ವಿಭಾಗವನ್ನು ರದ್ದು ಮಾಡಬೇಕು ಎಂದು ಹೇಳಿದ್ದಾರೆ. ಆದರೆ ಯಾವ ವ್ಯಕ್ತಿಗಳ ಒತ್ತಡ ಇದ್ದರೂ ಕೂಡ ಸರ್ಕಾರ ಉಪ ವಿಭಾಗವನ್ನು ರದ್ದು ಮಾಡಬಾರದು ಎಂದು ಶೇಖರ್ ಲಾಯಿಲ ಹೇಳಿದರು.


ಬೆಳ್ತಂಗಡಿ ಉಪ ವಿಭಾಗ ಉಪ ಅಧೀಕ್ಷಕ ರೋಹಿಣಿ ಸಿ.ಕೆ ಮಾತನಾಡಿ ಬೆಳ್ತಂಗಡಿ ಉಪ ವಿಭಾಗ ವ್ಯಾಪ್ತಿಗೆ ಧರ್ಮಸ್ಥಳ, ವೇಣೂರು, ಪುಂಜಾಲಕಟ್ಟೆ, ಕಡಬ, ಉಪ್ಪಿನಂಗಡಿ, ಬೆಳ್ತಂಗಡಿ ಪೊಲೀಸ್ ಠಾಣೆಗಳು ಬರುತ್ತಾದೆ. ಏನಾದರೂ ತೊಂದರೆ ಆದರೆ ನಮಗೆ ತಿಳಿಸಿ ನಾವು ತಕ್ಷಣ ಕ್ರಮ ಕೈಗೊಳ್ಳುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ದಲಿತ ಮುಖಂಡರಾದ ವಸಂತ್ ಬಿ.ಕೆ, ಶ್ರೀಧರ್ ಕಳೆಂಜ, ಶೇಖರ್ ಕುಕ್ಕೇಡಿ, ಸಂತೋಷ್ ಕುಮಾರ್, ನೇಮಿರಾಜ್ ಕಿಲ್ಲೂರು, ಪರಮೇಶ್ವರ್ ಅಂಡಿಂಜೆ, ಚೆನ್ನಕೇಶವ, ಸುಕುಮಾರ್, ನೋಣಯ್ಯ, ಸುಧಾಕರ್ ಎಂ, ಪ್ರಭಾಕರ್, ಯಮುನಾ, ವೆಂಕಣ್ಣ ಕೊಯ್ಯೂರು, ಕೃಷ್ಣಪ್ಪ, ಜಯಂತ್ ಕೊಯ್ಯೂರು, ಸಂಜೀವ, ರಾಜೇಶ್, ಸತೀಶ್, ಗಿರೀಶ್ ಮತ್ತು ಪ್ರಶಾಂತ್ ಉಪಸ್ಥಿತರಿದ್ದರು.









