




ಬೆಳ್ತಂಗಡಿ: ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಧರ್ಮಸ್ಥಳ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನವನ್ನು ಪಡೆದಿರುತ್ತಾರೆ.


ಪ್ರಾಥಮಿಕ ವಿಭಾಗದಲ್ಲಿ ಸಂಸ್ಕೃತ ಧಾರ್ಮಿಕ ಪಠಣದಲ್ಲಿ ಎರಡನೇ ತರಗತಿಯ ಸಂಪ್ರೀತ್ ಎ., ನಾಲ್ಕನೇ ತರಗತಿಯ ಶ್ರೀಕಾರ್ ಎಸ್. ಪ್ರಥಮ ಸ್ಥಾನ ಗಳಿಸಿರುತ್ತಾರೆ. ನಾಲ್ಕನೇ ತರಗತಿಯ ಶ್ರೇಯಸಿ ಎಚ್.ಎಸ್. ಅಭಿನಯ ಗೀತೆಯಲ್ಲಿ ದ್ವಿತೀಯ ಹಾಗೂ ಭಕ್ತಿ ಗೀತೆ ಸ್ಪರ್ಧೆಯಲ್ಲಿ ವಿಹಾನ್ ಮಯ್ಯ ತೃತೀಯ ಸ್ಥಾನವನ್ನು ಗಳಿಸಿರುತ್ತಾರೆ.
ಪ್ರೌಢಶಾಲಾ ವಿಭಾಗದಲ್ಲಿ ಸಂಸ್ಕೃತ ಭಾಷಣ ಸ್ಪರ್ಧೆಯಲ್ಲಿ ಹತ್ತನೇ ತರಗತಿಯ ಕ್ಷಮ ಡಿ.ಎಚ್., ಭಾವಗೀತೆ ಸ್ಪರ್ಧೆಯಲ್ಲಿ ಒಂಬತ್ತನೇ ತರಗತಿಯ ಪ್ರಾಪ್ತಿ ಶೆಟ್ಟಿ, ಮಿಮಿಕ್ರಿಯಲ್ಲಿ ಎಂಟನೇ ತರಗತಿಯ ಶ್ರವಣ್ ಬಿ.ಜೆ., ರಸಪ್ರಶ್ನೆ ಸ್ಪರ್ಧೆಯಲ್ಲಿ ಜೇಷ್ಠ ಶರ್ಮಾ ಮತ್ತು ಯಶ್ವಿತ್ ಕೆ. ಅವರ ತಂಡ ಪ್ರಥಮ ಸ್ಥಾನಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಹಾಗೆಯೇ ಧನ್ಯಶ್ರೀ, ದೃಶಾ ಮರಿಯ, ಅನುಜ್ಞಾ ರಾವ್, ಸಿಂಚನ, ದೀಕ್ಷಾ, ಪೃಥ್ವಿ ಇವರನ್ನೊಳಗೊಂಡ ಜಾನಪದ ನೃತ್ಯತಂಡವು ತೃತೀಯ ಸ್ಥಾನವನ್ನು ಗಳಿಸಿರುತ್ತದೆ.









