




ಶಿರ್ಲಾಲು: ಬ್ರಹ್ಮ ಬೈದರ್ಕಳ ಜಾತ್ರಾಮಹೋತ್ಸವ ಜ. 4 ರಿಂದ 6ರವರೆಗೆ ನಡೆಯಲಿದ್ದು ನೂತನ ಜಾತ್ರಾ ಸಮಿತಿಯನ್ನು ರಚಿಸಲಾಯಿತು. ಜಾತ್ರಾ ಮಹೋತ್ಸವದ ಅಧ್ಯಕ್ಷರಾಗಿ ಕೃಷ್ಣಪ್ಪ ಪೂಜಾರಿ ಸುದಲಾಯಿ, ಕಾರ್ಯದರ್ಶಿ ಪ್ರದೀಪ್ ಪಿಜಕೊಡಂಗೆ, ಕೋಶಾಧಿಕಾರಿಯಾಗಿ ರಕ್ಷಿತ್ ಪಿಜಕೊಡಂಗೆ ಆಯ್ಕೆಯಾದರು. ಗರಡಿ ಆಡಳಿತ ಸಮಿತಿಯ ಗೌರವಾಧ್ಯಕ್ಷ ರಮಾನಂದ ಗುಡ್ಡಾಜೆ, ಅಧ್ಯಕ್ಷ ವಿಶ್ವನಾಥ ಸಾಲಿಯಾನ್ ಪುದ್ದರಬೈಲು, ಸಲಹೆಗಾರರಾದ ಚಿದಾನಂದ ಪೂಜಾರಿ ಎಲ್ದಕ್ಕ, ಉಪಾಧ್ಯಕ್ಷ ಕೃಷ್ಣಪ್ಪ ಪೂಜಾರಿ ಕಟ್ಟ, ಪ್ರಧಾನ ಕಾರ್ಯದರ್ಶಿ ಎಮ್. ಕೆ. ಪ್ರಸಾದ್,ಕೋಶಾಧಿಕಾರಿ ಚಿದಾನಂದ ಇಂಚರ, ಜೊತೆ ಕಾರ್ಯದರ್ಶಿ ರಮೇಶ್, ಸಹಕಾರ ಸಂಘದ ನಿರ್ದೇಶಕ ಯಶೋಧರ ಸುವರ್ಣ, ಚಂದ್ರಶೇಖರ ಸೂರ್ಲೋಡಿ, ರಮೇಶ್ ಮಜಲಪಲಿಕೆ, ದಿವಾಕರ ಜಾರಿಗೆದಡಿ, ಸದಾಶಿವ ಪೂಜಾರಿ ಊರ, ಹರೀಶ್ ಕಲ್ಲಾಜೆ, ನಂದ ಕುಮಾರ್, ಪ್ರಶಾಂತ್ ಇಂದ್ರಪ್ರಸ್ಥ, ರಮೇಶ್ ಆಚಾರಿಬೆಟ್ಟು, ಬಿಲ್ಲವ ಮಹಿಳಾ ವೇದಿಕೆ ಅಧ್ಯಕ್ಷೆ ಶೋಭ ಶುಭನಿಲಯ, ಯುವಬಿಲ್ಲವ ವೇದಿಕೆ ಅಧ್ಯಕ್ಷ ಜ್ಞಾನೇಶ್ ಕುಮಾರ್, ಯುವವಾಹಿನಿ ಸಂಚಾಲನ ಸಮಿತಿ ಅಧ್ಯಕ್ಷ ಯತೀಶ್ ಕರಂಬಾರು, ಹರೀಶ್ ನೇತೃಬೈಲು, ಜಾತ್ರಾಸಮಿತಿಯ ಮಾಜಿ ಅಧ್ಯಕ್ಷ ಶಿವಾನಂದ ಮಜಲಪಲ್ಕೆ, ಹಾಗೂ ಊರವರು ಉಪಸ್ಥಿತರಿದ್ದರು.









