ಉಜಿರೆ: ಗ್ರಾಮ ಪಂಚಾಯತ್ ನಲ್ಲಿ ಮಕ್ಕಳ ದಿನಾಚರಣೆ

0

ಉಜಿರೆ: ಅಂಗನವಾಡಿ ಕೇಂದ್ರದ ಮಕ್ಕಳ ದಿನಾಚರಣೆಯನ್ನು ಉಜಿರೆ ಗಾಮ ಪಂಚಾಯತ್ ಸುವರ್ಣ ಸೌಧದಲ್ಲಿ ನ. 14ರಂದು ನಡೆಸಲಾಯಿತು. ಈ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯತ್ ನ ಅಧ್ಯಕ್ಷೆ ಉಷಾಕಿರಣ್ ಕಾರಂತ್ ಭಾಗವಹಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುಟಾಣಿ ಹಿಮಾ ಕ್ಷ್ ಭಂಡಾರಿ ವಹಿಸಿಕೊಂಡಿದ್ದರು. ಪುಟಾಣಿ ಧನ್ವಿಕಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಾಲವಿಕಾಸ ಸಮಿತಿಯ ಅಧ್ಯಕ್ಷರು, ಸದಸ್ಯರು ಮಹಿಳಾ ಮಂಡಲದ ಸದಸ್ಯರಾದ ಸವಿತಾ ಜಯದೇವ್, ನಂದಿನಿ, ತಾರಾ,ಸ್ರೀಶಕ್ತಿ ಸದಸ್ಯರು ಮಕ್ಕಳ ಹೆತ್ತವರು ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಹಾಜರಿದ್ದರು.

ಗ್ರಾಮ ಪಂಚಾಯತ್ ಅಧ್ಯಕ್ಷರನ್ನು ಸನ್ಮಾನಿಸಲಾಯಿತು. ನಡೆದ ವಿವಿದ ಆಟೋಟ ಸ್ಪರ್ಧೆ ನಡೆಸಿ ವಿಜೆತರಿಗೆ ಹಾಗೂ ಭಾಗವಹಿದವರಿಗೆ ಬಹುಮಾನ ವಿತರಿಸಲಾಯಿತು. ಮಕ್ಕಳ ಛದ್ಮವೇಷ ಸಂಸ್ಕೃತಿಕ ಕಾರ್ಯಕ್ರಮ ನಡೆಸಲಾಯ್ತಿ . ದಿನದ ಬಹುಮಾನದ ಪ್ರಯೋಜಕರು ಅಕ್ಷತಾ ಪುನೀತ್ ಭಂಡಾರಿ, ಊಟದ ವ್ಯವಸ್ಥೆ ಯನ್ನು ಗೀತಾ ಹರೀಶ್ ದೇವಾಡಿಗ ಮತ್ತುವೀಣಾ ಪ್ರಶಾಂತ ಇವರು ವಹಿಸಿಕೊಂಡಿರುತ್ತಾರೆ. ಅ೦ಗನವಾಡಿ ಸಹಾಯಕಿಯವರು ಸಹಕರಿಸಿದರು. ಅಗನವಾಡಿ ಕಾರ್ಯಕರ್ತೆ ಸ್ವಾಗತಿಸಿದರು.

LEAVE A REPLY

Please enter your comment!
Please enter your name here