ಲಾಯಿಲ: ವಿಕಲ ಚೇತನರ ಸಮನ್ವಯ ಗ್ರಾಮ ಸಭೆ

0

ಬೆಳ್ತಂಗಡಿ: ತಾಲೂಕಿನ ಲಾಯಿಲ ಗ್ರಾಮ ಪಂಚಾಯತ್ ನಲ್ಲಿ ನ.14ರಂದು 2025-26ನೇ ಸಾಲಿನ ವಿಕಲ ಚೇತನರ ಸಮನ್ವಯ ಗ್ರಾಮ ಸಭೆಯನ್ನು ಹಮ್ಮಿಕೊಳ್ಳಲಾಯಿತು. ಸಭೆಯ ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷೆ ಜಯಂತಿ ಎಂ.ಕೆ. ವಹಿಸಿದರು. ಸಭೆಯಲ್ಲಿ ಪಂಚಾಯತ್ ಉಪಾಧ್ಯಕ್ಷರು, ಸದಸ್ಯರಾದ ಜಯಂತಿ, ಆಶಾಸಾಲ್ದಾನ, ರಜನಿ ಎಂ. ಆರ್. ಅರವಿಂದ ಕುಮಾರ್, ಲೆಕ್ಕಸಹಾಯಕಿ ಸುಪ್ರಿತಾ ಶೆಟ್ಟಿ ಮತ್ತು ಅರೋಗ್ಯ ಕಾರ್ಯಕರ್ತೆ ಸರಸ್ವತಿ, ಆಶಾ ಕಾರ್ಯಕರ್ತರು ಹಾಗೂ ಇಂದಬೆಟ್ಟು ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಜೋಸೆಫ್ ಅವರು ಹಾಜರಿದ್ದು ವಿಶೇಷ ವಿಕಲಚೇತನರಿಗೆ ಸಿಗುವ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು. ಹಾಗೂ ಸೌಭಾಗ್ಯ ವಿಕಲಚೇತನರ ಪತ್ತಿನ ಸಹಕಾರಿ ಸಂಘದ ವ್ಯವಸ್ಥಾಪಕರು ಉಪಸ್ಥಿತರಿದ್ದರು.

ವಿಕಲಚೇತನರಿಗೆ ಬ್ಯಾಂಕಿನಿಂದ ಸಿಗುವ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು. ಆಯ್ದ ಫಲಾನುಭವಿಗಳಿಗೆ ಪಂಚಾಯತ್ ವತಿಯಿಂದ ವಿಲ್ ಚೇರ್, ವಾಕರ್ ವಿತರಿಸಲಾಯಿತು. ಗ್ರಾಮ ಸಭೆಗೆ ಆಗಮಿಸಿದ ಎಲ್ಲರಿಗೂ ಅರೋಗ್ಯ ತಪಾಸಣೆಯನ್ನು ಏರ್ಪಡಿಸಲಾಗಿತ್ತು. ವಿಶೇಷವಾಗಿ ಪಂಚಾಯತ್ ನಲ್ಲಿ ಸೇವೆ ಸಲಿಸುತ್ತಿರುವ VRW ಸೋಮನಾಥ ಹಾಗೂ ಸ್ವಚ್ಛತಾ ಸಿಬ್ಬಂದಿ ಯೋಗೀಶ್ ಅವರಿಗೆ ಉತ್ತಮ ಸೇವಾ ಮನೋಭಾವಕ್ಕೆ ಗೌರವ ಸನ್ಮಾನ ಹಮ್ಮಿಕೊಳ್ಳಲಾಯಿತು. ಗ್ರಾಮ ಪಂಚಾಯತ್ ಬಿಲ್ ಕಲೆಕ್ಟರ್ ಮೋಹನ್ ಜಮೆ ಖರ್ಚು ಮಂಡನೆ ಮಾಡಿದರು ಸಿಬ್ಬಂದಿಗಳು ಸಹಕರಿಸಿದರು. ರಾಷ್ಟ್ರಗೀತೆ ಯೊಂದಿಗೆ ಸಭೆಯು ಮುಕ್ತಯಗೊಂಡಿತು. ಫಲಾನುಭವಿಗಳ ಅನಿಸಿಕೆ ಜೊತೆಗೆ ಕಾರ್ಯಕ್ರಮವನ್ನು ಪಂಚಾಯತ್ ಲೆಕ್ಕ ಸಹಾಯಕಿ ಕಾರ್ಯಕ್ರಮವನ್ನು ನಿರೂಪಣೆ, ಮಾಡಿ ಧನ್ಯವಾದ ಸಲ್ಲಿಸಿದರು.

LEAVE A REPLY

Please enter your comment!
Please enter your name here