



ಗುರುವಾಯನಕೆರೆ: ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘ, ಕುವೆಟ್ಟು ವಲಯ ಬಂಟರ ಸಮಿತಿಯಿಂದ ನ. 16ರಂದು ಗುರುವಾಯನಕೆರೆ ಬಂಟರ ಭವನದಲ್ಲಿ ಕುವೆಟ್ಟು ಬಂಟರ ಸಮಾವೇಶ ನಡೆಯಿತು. ಬಂಟರ ಯಾನೆ ನಾಡವರ ಸಂಘದ ಗೌರವ ಮಾರ್ಗದರ್ಶಕ ಉದ್ಯಮಿ ನವಶಕ್ತಿ ಶಶಿಧರ್ ಶೆಟ್ಟಿ ಬರೋಡ ಅವರು ಸಮಾವೇಶ ಉದ್ಘಾಟಿಸಿದರು.


ಕುವೆಟ್ಟು ವಲಯ ಬಂಟರ ಸಮಿತಿ ಅಧ್ಯಕ್ಷ ಶಶಿರಾಜ್ ಶೆಟ್ಟಿ ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಜಯಂತ ಶೆಟ್ಟಿ ಭಂಡಾರಿಗುಡ್ಡೆ, ಕಾರ್ಯದರ್ಶಿ ಸುರೇಶ್ ಶೆಟ್ಟಿ ಲಾಯಿಲ, ಮಂಗಳೂರು ಬಂಟರ ಯಾನೆ ನಾಡವರ ಮಾತೃ ಸಂಘದ ಬೆಳ್ತಂಗಡಿ ತಾಲೂಕು ಸಮಿತಿ ಸಂಚಾಲಕ ಎಂ. ಜಯರಾಮ ಭಂಡಾರಿ ಧರ್ಮಸ್ಥಳ, ನಿರ್ದೇಶಕರಾದ ರಾಜು ಶೆಟ್ಟಿ ಬೆಂಗತ್ಯಾರ್, ಆನಂದ್ ಶೆಟ್ಟಿ ಐಸಿರಿ, ವಿಜಯ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಅಧ್ಯಕ್ಷ ಅಜಿತ್.ಜಿ.ಶೆಟ್ಟಿ ಕೊರ್ಯಾರ್, ಉಪಾಧ್ಯಕ್ಷ ಜಯಂತ್ ಶೆಟ್ಟಿ ಕುಂಟಿನಿ, ಮಹಿಳಾ ವಿಭಾಗದ ಅಧ್ಯಕ್ಷೆ ಜಯಲಕ್ಷ್ಮಿ ಎನ್. ಸಾಮಾನಿ, ಬಂಟರ ಯುವ ವಿಭಾಗದ ಕಾರ್ಯದರ್ಶಿ ಪ್ರೇಮ್ ಶೆಟ್ಟಿ, ತಾಲೂಕು ಬಂಟರ ಸಂಘದ ವಿಶೇಷ ಆಹ್ವಾನಿತರಾದ ಪುರಂದರ ಶೆಟ್ಟಿ ಪಾಡ್ಯಾರು, ಕುವೆಟ್ಟು ವಲಯದ ಸಹ ಸಂಚಾಲಕ ಸತೀಶ್ ಶೆಟ್ಟಿ ಕುಂಜಲೊಟ್ಟು, ಕಳಿಯ ಬಂಟರ ಗ್ರಾಮ ಸಮಿತಿ ಅಧ್ಯಕ್ಷ ಪುರಂದರ ರೈ ನಾಳ, ಒಡಿಲ್ನಾಳ ಬಂಟರ ಗ್ರಾಮ ಸಮಿತಿ ಅಧ್ಯಕ್ಷ ಉಮೇಶ್ ಶೆಟ್ಟಿ ಸಂಬೋಳ್ಯ ಉಪಸ್ಥಿತರಿದ್ದರು.

ಸಮಾವೇಶದಲ್ಲಿ ಕುವೆಟ್ಟು ವಲಯದ ಸಾಧಕರಿಗೆ ಸನ್ಮಾನಿಸಲಾಯಿತು. ಕುವೆಟ್ಟು, ಓಡಿಲ್ನಾಳ, ಕಳಿಯ ಗ್ರಾಮದ ಬಂಟ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಸಾಕ್ಷಿ ಕಳಿಯ ಪ್ರಾರ್ಥನೆ ಮಾಡಿದರು. ವಿಠಲ್ ಶೆಟ್ಟಿ ಉಪ್ಪಡ್ಕ ಕಾರ್ಯಕ್ರಮ ನಿರ್ವಹಿಸಿದರು. ಕುವೆಟ್ಟು ಬಂಟರ ಸಮಿತಿ ಅಧ್ಯಕ್ಷರಾದ ಪ್ರದೀಪ್ ಶೆಟ್ಟಿ ಧನ್ಯವಾದಗೈದರು.









