




ಬೆಳ್ತಂಗಡಿ: ಬಂದಾರು ಶ್ರೀರಾಮನಗರ ಜೈ ಶ್ರೀ ರಾಮ್ ಗೆಳೆಯರ ಬಳಗದ ನೂತನ ಪದಾಧಿಕಾರಿಗಳ ಆಯ್ಕೆ ಬಳಗದ ಗೌರವಾಧ್ಯಕ್ಷ ಉದಯ ಬಿ.ಕೆ.ಅವರ ಉಪಸ್ಥಿತಿಯಲ್ಲಿ ಧರ್ಮಶ್ರೀ ಕುಂಭಭವನದಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಶ್ರೀಧರ ಯಾನೆ ಡೀಕಯ್ಯ, ಉಪಾಧ್ಯಕ್ಷರಾಗಿ ಧನಂಜಯ, ಪ್ರಧಾನ ಕಾರ್ಯದರ್ಶಿಯಾಗಿ ಕುಶಾಲಪ್ಪ ಕುಂಬಾರ, ಜತೆ ಕಾರ್ಯದರ್ಶಿಯಾಗಿ ಚಂದ್ರಶೇಖರ ಬಿ.ಕೆ. ಹಾಗೂ ಖಜಾಂಚಿಯಾಗಿ ವಿಶ್ವನಾಥ್ ಕುಲಾಲ್ ಅವರನ್ನು ಆಯ್ಕೆ ಮಾಡಲಾಯಿತು. ಹಿರಿಯ ಸದಸ್ಯರಾದ ಪ್ರಕಾಶ್ ಕೆ, ಉಮೇಶ್, ಲಿಂಗಪ್ಪ ಕುಂಬಾರ, ಶಿವರಾಮ ಮತ್ತಿತರರು ಉಪಸ್ಥಿತರಿದ್ದರು. ಬಳಗದ ಮೂಲಕ ಈ ವರ್ಷ ನಡೆಯಬೇಕಾದ ಕಾರ್ಯ ಚಟುವಟಿಕೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.









