ನಿಡ್ಲೆ: ಆನಂದ ವೇಲ್ವೇಸ್ ರೆಸಾರ್ಟ್‌ನ ಮಹಡಿಯಿಂದ ಬಿದ್ದು ಮನೀಶ್‌ ಮೃತ್ಯು

0

ನಿಡ್ಲೆ: ಆನಂದ ವೇಲ್ವೇಸ್ ರೆಸಾರ್ಟ್ ನಲ್ಲಿ ಕೆಲಸ ಮಾಡುತ್ತಿದ್ದ ಯುವಕನೊರ್ವ ಆಕಸ್ಮಿಕವಾಗಿ ಕಟ್ಟಡದ ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟ ಘಟನೆ ನ.15ರಂದು ತಡ ರಾತ್ರಿ ಸಂಭವಿಸಿದೆ. ನಿಡ್ಲೆ ಗ್ರಾಮದ ಮಾಪಲಾಜೆ ಸುಂದರ ಶೆಟ್ಟಿಯವರ ಪುತ್ರ ಮನೀಶ್ (20ವ.) ಮೃತಪಟ್ಟ ಯುವಕ.

ಮನೀಶ್ ರವರು ಕಟ್ಟಡದ ಮಹಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಕೆಳಗೆ ಬಿದ್ದಿದ್ದು, ಗಾಯಗೊಂಡ ಅವರನ್ನು ಉಜಿರೆ ಖಾಸಗಿ ಆಸ್ಪತ್ರೆ ಕರೆತಂದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟರೆನ್ನಲಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here