ಪ್ರತಿಭಾ ಕಾರಂಜಿ:ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

0

ಬೆಳ್ತಂಗಡಿ: ನ. 15ರಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಆವಾಸೀಯ ವಿದ್ಯಾಲಯ ಮುಗುಳಿಯಲ್ಲಿ ನಡೆದ ಬೆಳ್ತಂಗಡಿ ವಲಯ ಮಟ್ಟದ ಕಿರಿಯ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲಾ ವಿಭಾಗದ ಪ್ರತಿಭಾ ಕಾರಂಜಿಯಲ್ಲಿ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ಕಿರಿಯ ಪ್ರಾಥಮಿಕ ವಿಭಾಗದಲ್ಲಿ 1ನೇ ತರಗತಿಯ ಸಾಧ್ಯ ಸಂಸ್ಕೃತ ಧಾರ್ಮಿಕ ಪಠಣದಲ್ಲಿ ಪ್ರಥಮ ಸ್ಥಾನ, 4ನೇ ತರಗತಿಯ ಝುಲ್ಪಾ ಫಾತಿಮಾ ಅರೇಬಿಕ್ ಧಾರ್ಮಿಕ ಪಠಣದಲ್ಲಿ ಪ್ರಥಮ ಸ್ಥಾನ, 3ನೇ ತರಗತಿಯ ಅರ್ಥ.ಎಲ್ ಅಭಿನಯ ಗೀತೆಯಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. 4ನೇ ತರಗತಿಯ ಶಿಶಿರ್. ಕೆ ಗೌಡ ಆಶುಭಾಷಣದಲ್ಲಿ ದ್ವಿತೀಯ ಸ್ಥಾನ, 3ನೇ ತರಗತಿಯ ತ್ರಿಶಾನ್ ಇಂಗ್ಲಿಷ್ ಕಂಠಪಾಠದಲ್ಲಿ ದ್ವಿತೀಯ ಸ್ಥಾನ, 4ನೇ ತರಗತಿಯ ಜೀವಿತ್ ಕ್ಲೇ ಮಾಡೆಲಿಂಗ್ ನಲ್ಲಿ ತೃತೀಯ ಸ್ಥಾನ, ಮೂರನೇ ತರಗತಿಯ ಅದ್ವಿಕ್.ಎಸ್ ರಾವ್ ದೇಶಭಕ್ತಿ ಗೀತೆಯಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.

ಹಿರಿಯ ಪ್ರಾಥಮಿಕ ವಿಭಾಗದಲ್ಲಿ 6ನೇ ತರಗತಿಯ ಹೃದ್ಯಇ .ಬಿ. ದೇಶಭಕ್ತಿ ಗೀತೆಯಲ್ಲಿ ಪ್ರಥಮ ಸ್ಥಾನ, 6ನೇ ತರಗತಿಯ ಬ್ರಾಯನ್ ಲೋಬೊ ಹಿಂದಿ ಕಂಠ ಪಾಠದಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. 7ನೇ ತರಗತಿಯ ರೊಸೆಲ್ಲಾ ಆನ್ ಪ್ರಕಾಶ್ ಕವನ ವಾಚನದಲ್ಲಿ ದ್ವಿತೀಯ ಸ್ಥಾನ, 5ನೇ ತರಗತಿಯ ಚಿನ್ಮಯಿ ನಾಯಕ್ ಸಂಸ್ಕೃತ ಧಾರ್ಮಿಕ ಪಠಣದಲ್ಲಿ ತೃತೀಯ ಸ್ಥಾನ, ಏಳನೇ ತರಗತಿಯ ಯಶಿಕಾ ಕ್ಲೇ ಮಾಡಲಿಂಗ್ ನಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

LEAVE A REPLY

Please enter your comment!
Please enter your name here