


ಕಕ್ಯಪದವು: ಎಲ್.ಸಿ.ಆರ್. ಇಂಡಿಯನ್ ವಿದ್ಯಾಸಂಸ್ಥೆಯಿಂದ ಎಸ್. ಎಸ್. ಎಲ್. ಸಿ., ಪದವಿಪೂರ್ವ ಹಾಗೂ ಪದವಿ ವಿಭಾಗದ ವಿದ್ಯಾರ್ಥಿಗಳಿಗೆ ಮನರಂಜನೆ ಹಾಗೂ ಪಠ್ಯದ ಹೊರತಾದ ಜ್ಞಾನವನ್ನು ನೀಡುವ ಮತ್ತು ಹೊಸ ಸ್ಥಳಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಕೇರಳದಲ್ಲಿ ಒಂದು ದಿನದ ಶೈಕ್ಷಣಿಕ ಪ್ರವಾಸವನ್ನು ಆಯೋಜಿಸಲಾಯಿತು. ಈ ಪ್ರವಾಸದಲ್ಲಿ ಎಲ್ಲಾ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ ಉಲ್ಲಾಸದಿಂದ ಸಮಯ ಕಳೆಯುವಂತಾಯಿತು.
ಪ್ರವಾಸ ಮಾರ್ಗದರ್ಶಕ ರಾಜೇಶ್ ಮತ್ತು ಅವರ ತಂಡವು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಅವರು ಈ ಸಂದರ್ಭದಲ್ಲಿ ಅನುಸರಿಸಬೇಕಾದ ನಿಯಮಗಳು, ಸ್ಥಳದ ವೈಶಿಷ್ಟ್ಯಗಳು ಹಾಗೂ ಸುರಕ್ಷತಾ ಕ್ರಮಗಳ ಕುರಿತು ವಿದ್ಯಾರ್ಥಿಗಳಿಗೆ ವಿವರವಾದ ಸೂಚನೆಗಳನ್ನು ನೀಡಿದರು.


ಈ ವೇಳೆ ವಿದ್ಯಾರ್ಥಿಗಳು ಪ್ರಕೃತಿಯ ಸೌಂದರ್ಯವನ್ನು ಅನುಭವಿಸಿ, ಪರಸ್ಪರ ಸಹಕಾರ, ಸ್ನೇಹ ಮತ್ತು ಒಕ್ಕೂಟದ ಮನೋಭಾವವನ್ನು ಬೆಳೆಸಿದರು. ವಿದ್ಯಾರ್ಥಿಗಳ ಜೊತೆಯಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಜೋಸ್ಟಾನ್ ಲೋಬೊ, ಮುಖ್ಯ ಶಿಕ್ಷಕಿ ಹಾಗೂ ಉಪನ್ಯಾಸಕರುಗಳು ಸಹ ಸಕ್ರಿಯವಾಗಿ ಭಾಗವಹಿಸಿ, ವಿದ್ಯಾರ್ಥಿಗಳೊಂದಿಗೆ ಸಂತೋಷದಿಂದ ಸಮಯ ಕಳೆಯುವಂತಾಯಿತು.
ಈ ಶೈಕ್ಷಣಿಕ ಪ್ರವಾಸವು ವಿದ್ಯಾರ್ಥಿಗಳಲ್ಲಿ ಹೊಸ ಶಕ್ತಿ, ಉತ್ಸಾಹ ಮತ್ತು ನೈಜ ಜೀವನದ ಜ್ಞಾನವನ್ನು ಹೆಚ್ಚಿಸಲು ಸಹಕಾರಿಯಾಯಿತು. ಕೊನೆಯಲ್ಲಿ ಎಲ್ಲರೂ ಸಂತೋಷದಿಂದ ನೆನಪಿನ ಕ್ಷಣಗಳನ್ನು ಹಂಚಿಕೊಂಡು, ಸುರಕ್ಷಿತವಾಗಿ ಕಾಲೇಜಿಗೆ ವಾಪಾಸ್ಸಾದರು.









