




ಶಿಬರಾಜೆ: ಶಂಕಿತ ಜ್ವರದಿಂದ ಬಳಲುತ್ತಿದ್ದ ಕುಕ್ಕಾಜೆ ನಿವಾಸಿ ಕುಶಾಲಪ್ಪ ನಾಯ್ಕ್ (45) ನ. 13ರಂದು ಮುಂಜಾನೆ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಜ್ವರ ವಿಪರೀತಗೊಂಡು ಲಿವರ್ ಮತ್ತು ಕಿಡ್ನಿ ವೈಫಲ್ಯಗೊಂಡು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಮೃತರು ಪತ್ನಿ ಮೀನಾಕ್ಷಿ ಪುತ್ರಿಯರಾದ ಅಶ್ವಿತಾ, ಅಂಕಿತಾ ಮತ್ತು ಅನಿತಾ ಅವರನ್ನು ಅಗಲಿದ್ದಾರೆ.









