



ಬೆಳ್ತಂಗಡಿ: ತಾಲೂಕು ಮೊಗ್ರು ಗ್ರಾಮದ ಮುಗೇರಡ್ಕ ನಿವಾಸಿ ಚಂದ್ರಹಾಸ ಪೂಜಾರಿ ಅವರಿಗೆ ಕಾರು ಅಪಘಾತ ಆಗಿರುತ್ತದೆ. ಅವರ ಚಿಕಿತ್ಸೆಗೆ 5 ರಿಂದ 7 ಲಕ್ಷ ಬೇಕೆಂದು ಡಾಕ್ಟರ್ ತಿಳಿಸಿರುತ್ತಾರೆ. ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿರುವ ಇವರ ಕುಟುಂಬವು ಕಡುಬಡತನದ ಕುಟುಂಬವಾಗಿದೆ. ಚಿಕಿತ್ಸೆಗೆ ಬೇಕಾದ ಹಣವನ್ನು ಹೊಂದಿಸಲು ಕಷ್ಟವಾಗಿದೆ. ಆದರಿಂದ ಚಿಕಿತ್ಸೆಯ ನೆರವಿಗಾಗಿ ಮನೆಯವರು ವಿನಂತಿಸಿದ್ದಾರೆ.









