


ಉಜಿರೆ: ಮಡಂತ್ಯಾರಿನ ಗಾರ್ಡಿಯನ್ ಏಂಜೆಲ್ಸ್ ಶಾಲೆಯಲ್ಲಿ ನ. 6, 7ರಂದು ಜರಗಿದ 2025-26ನೇ ಸಾಲಿನ ಬೆಳ್ತಂಗಡಿ ತಾಲೂಕು ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಉಜಿರೆ ಶ್ರೀ ಧ.ಮಂ. ಅನುದಾನಿತ ಸೆಕೆಂಡರಿ ಶಾಲೆಯ ನಾಲ್ವರು ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.


ಶಾಲೆಯ ಒಟ್ಟು 15 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಶ್ರೇಯಸ್ ಗೌಡ ಲಾಂಗ್ ಜಂಪ್ ಮತ್ತು ತ್ರಿಪಲ್ ಜಂಪ್ ನಲ್ಲಿ ಪ್ರಥಮ ಸ್ಥಾನದೊಂದಿಗೆ ಅಥ್ಲೆಟಿಕ್ಸ್ ನಲ್ಲಿ ವೈಯಕ್ತಿಕ ಚಾಂಪಿಯನ್ ಶಿಪ್ ಪಡೆದುಕೊಂಡಿದ್ದಾರೆ.
ಶ್ರವಣ್ ಶೆಟ್ಟಿ ಹೈ ಜಂಪ್ ಮತ್ತು ಡಿಸ್ಕಸ್ ತ್ರೋನಲ್ಲಿ ಪ್ರಥಮ ಸ್ಥಾನ, ಶರತ್ 3,000 ಮೀ. ಓಟದಲ್ಲಿ ಪ್ರಥಮ, ಶರಣ್ ಲಾಂಗ್ ಜಂಪ್ ನಲ್ಲಿ ಪ್ರಥಮ ಪಡೆದಿದ್ದಾರೆ. ಅಲ್ಲದೆ, ಉತ್ತಮ್, ಶಿವಾನಂದ ಮತ್ತು ಅಭಿಷೇಕ್ 4X400 ಮೀ. ರಿಲೇಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕ ಪರಮೇಶ್ವರ್ ತರಬೇತಿ ನೀಡಿರುತ್ತಾರೆ.









