




ಬೆಳ್ತಂಗಡಿ: ಮಿನಿ ರಾಜ್ಯ ಒಲಿಂಪಿಕ್ ನಲ್ಲಿ ಹದಿನಾಲ್ಕು ವರ್ಷದ ಒಳಗಿನ ಬಾಲಕರ ವಾಲಿಬಾಲ್ ಪಂದ್ಯಾಕೂಟದಲ್ಲಿ ಚಿನ್ನದ ಪದಕ ಹಾಗೂ ಟ್ರೋಫಿಯನ್ನು ಪಡೆದ ದಕ್ಷಿಣ ಕನ್ನಡ ಜಿಲ್ಲಾ ತಂಡದ ನಾಯಕ ಶಿಶಿರ್ ಜಯವಿಕ್ರಮ್ ಹಾಗೂ ಕೋಚ್ ಮನೋಜ್ ನೆಲ್ಯಾಡಿ. ನ. 9ರಂದು ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆದ ಮಿನಿ ಒಲಿಂಪಿಕ್ ನ ಸಮಾರೋಪ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ರಾಜ್ಯದ ಗೃಹ ಮಂತ್ರಿ ಜಿ.ಪರಮೇಶ್ವರ್, ಆರೋಗ್ಯ ಮಂತ್ರಿ ದಿನೇಶ್ ಗುಂಡೂರಾವ್, ಕರ್ನಾಟಕ ಒಲಿಂಪಿಕ್ ಪೆಡರೇಶನ್ ಅಧ್ಯಕ್ಷ ಡಾ.ಕೆ.ಗೋವಿಂದ ರಾಜ್ ಹಾಗೂ ಗಣ್ಯರ ಸಮಕ್ಷಮದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪಡೆದರು.









