


ಕಲ್ಮಂಜ: ಅಂತರಬೈಲು ಅಲೆಕ್ಕಿ ಬದಿನಡೆ ಕ್ಷೇತ್ರದ ಜೀರ್ಣೋದ್ದಾರ ಪ್ರಯುಕ್ತ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ಪ್ರಾಯಚ್ಚಿತ್ತ ಹೋಮ ಹವನಾದಿಗಳು ನ. 6ರಿಂದ ನಡೆಯುತ್ತಿದ್ದು ನ. 7ರಂದು ಸರ್ಪ ಸಂಸ್ಕಾರ ಹಾಗೂ ಸಂಸ್ಕಾರಾದಿ ಮಂಗಳ ಕಾರ್ಯ ಮತ್ತು ಪವಮಾನ ಹೋಮ ನಡೆಯಿತು. ನ.8ರಂದು ಗಣಪತಿ ಹೋಮ,ಸಂಜೀವಿನಿ ಮೃತ್ಯುಂಜಯ ಹೋಮ ಮತ್ತು ಇತರ ದೇವತಾ ಕಾರ್ಯಕ್ರಮಗಳು ನಡೆಯಿತು. ಶ್ರೀ ರಾಮ ಕ್ಷೇತ್ರದ ಪೀಠಾಧೀಶ 1008 ಮಹಾ ಮಂಡಲೇಶ್ವರ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಭೇಟಿ ನೀಡಿದರು.




ವೇದಮೂರ್ತಿ ವಿಷ್ಣು ಮೂರ್ತಿ ಹೆಬ್ಬಾರ್ ಮುಂಡ್ರುಪ್ಪಾಡಿ ಮತ್ತು ಅಂತರ ಬೈಲು ಅನಂತೇಶ ಚಡಗ ಇವರ ನೇತೃತ್ವದಲ್ಲಿ ಪೂಜಾ ವಿಧಿವಿಧಾನ ನಡೆಯಿತು. ಸಮಿತಿಯ ಅಧ್ಯಕ್ಷ ತುಕಾರಾಮ ಸಾಲಿಯಾನ್ಆರ್ಲ,
ಗೌರವಾಧ್ಯಕ್ಷ ಕೃಷ್ಣಪ್ಪ ಗುಡಿಗಾರ, ಸಂಚಾಲಕ ನವೀನ್ ಪ್ರಕಾಶ್, ಕಾರ್ಯದರ್ಶಿ ಸುನೀಲ್ ಕನ್ಯಾಡಿ, ಕೋಶಾಧಿಕಾರಿ ಮಂಜು ಗುಡಿಗಾರ, ಸಂಘಟನ ಕಾರ್ಯದರ್ಶಿ ರಾಘವೇಂದ್ರ ಗೌಡ, ಹುಂಕ್ರೋಟ್ಟು, ಜತೆ ಕಾರ್ಯದರ್ಶಿ ಶ್ರೀನಿವಾಸ ಗೌಡ, ಸಮಿತಿ ಸದಸ್ಯರು, ಊರವರು ಉಪಸ್ಥಿತರಿದ್ದರು. ಸಂಜೆ ಪಾರಾಯಣ,ಸುದರ್ಶನ ಹೋಮ, ಅಘೋರ ಹೋಮ, ಸ್ತ್ರುಷ್ಟುಪ್ ಹೋಮ, ಆಕರ್ಷಣೆ, ಉಚ್ಚಾಟನೆ, ಸುದರ್ಶನ ಬಲಿ, ನಡೆಯಲಿದೆ. ನ. 9ರಂದು ತಿಲಹೋಮ,ಪುರುಷ ಸೂಕ್ತ ಹೋಮ,ಸರ್ಪತ್ರಯ ಹೋಮ, ಆಶ್ಲೇಷ ಬಲಿ, ಚಕ್ರಬ್ಜ ಮಂಡಲ ಪೂಜೆ,ಬ್ರಹ್ಮಚಾರಿ ಆರಾಧನೆ, ದ್ವಾದಶ ಮೂರ್ತಿ ಆರಾಧನೆ, ಸಂಜೆ ದುರ್ಗಾ ಪೂಜೆ, ನಡೆಯಲಿದೆ









