ಪಟ್ಟೂರು: ಗೋ ಕಾಯ್ದೆ ಹೆಸರಲ್ಲಿ ಮಹಿಳೆಯ ಮನೆ ಜಪ್ತಿ: ಬೆಳ್ತಂಗಡಿ ಮುಸ್ಲಿಂ ಒಕ್ಕೂಟದಿಂದ ಖಂಡನಾ ಸಭೆ

0

ಬೆಳ್ತಂಗಡಿ: ಪಟ್ರಮೆ ಗ್ರಾಮದ ಪಟ್ಟೂರು ಎಂಬಲ್ಲಿ ಗೋ ಕಾಯ್ದೆಯ ಹೆಸರಿನಲ್ಲಿ ಅಮಾಯಕ ಮಹಿಳೆಯರನ್ನು ಸಿಲುಕಿಸಿ ಅವರ ಮನೆ ಜಪ್ತಿ ಮಾಡಿದ ಪೊಲೀಸರ ಕ್ರಮವನ್ನು ಖಂಡಿಸಿ ತಾಲೂಕಿನ ಮುಸ್ಲಿಂ ಒಕ್ಕೂಟದ ನೇತೃತ್ವದಲ್ಲಿ ತುರ್ತು ಸಭೆ ನಡೆಸಿ ಘಟನೆಯನ್ನು ತೀವ್ರವಾಗಿ ಖಂಡಿಸಲಾಯಿತು.

ಜಮೀಯತುಲ್ ಫಲಾಹ್ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ತಾಲೂಕು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಬಿ.ಎ ನಝೀರ್ ಬೆಳ್ತಂಗಡಿ ವಹಿಸಿದ್ದರು.

ಕಾನೂನು ಸುವ್ಯವಸ್ಥೆಯ ಹೆಸರಿನಲ್ಲಿ ತಾಲೂಕಿನಲ್ಲಿ ಮುಸಲ್ಮಾನರನ್ನು ಗುರಿಯಾಗಿಸಲಾಗುತ್ತಿದೆ. ಗೋ ಹತ್ಯೆಯ ಹೆಸರಿನಲ್ಲಿ ಧಾರ್ಮಿಕ ಶ್ರದ್ಧಾ ಕೇಂದ್ರವಾದ ಮಸೀದಿಗೆ ಪೊಲೀಸರು‌ ಬಂದು ಸಮುದಾಯಕ್ಕೆ ಅವಮಾನವಾಗುವ ಹಾಗೆ ನಡೆದುಕೊಳ್ಳಲಾಗುತ್ತಿದೆ. ದ್ವೇಷ ಭಾಷಣದ ಹೆಸರಿನಲ್ಲಿ ಹಿಂದೂ ನಾಯಕರುಗಳ ವಿರುದ್ಧ ಆಗುವ ಕೇಸಿಗೆ ಪ್ರತಿಯಾಗಿ ಮುಸಲ್ಮಾನ ನಾಯಕರುಗಳ ಬಗ್ಗೆ ಸುಳ್ಳುಕೇಸು ಹಾಕಿ ಸರಿಸಮಾನ ಮಾಡಿ ಯಾರನ್ನೋ ಸಮಾಧಾನಪಡಿಸಲಾಗುತ್ತಿದೆ. ಈ ಎಲ್ಲಾ ಘಟನೆಗಳ ಬಗ್ಗೆ ಮೇಲಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸುವುದು ಇತ್ಯಾದಿ ಬಗ್ಗೆ ಸಭೆಯಲ್ಲಿ ನಿರ್ಣಯಕ್ಕೆ ಬರಲಾಯಿತು.

ಸಭೆಯಲ್ಲಿ ಅಬ್ದುಲ್ ರಝಾಕ್ ಕನ್ನಡಿಕಟ್ಟೆ, ಅಕ್ಬರ್ ಬೆಳ್ತಂಗಡಿ, ಸಲೀಂ ಸುನ್ನತ್‌ಕೆರೆ, ಕರೀಂ ಗೇರುಕಟ್ಟೆ, ಅಝರ್ ನಾವೂರು, ಕೆ.ಎಸ್ ಅಬ್ದುಲ್ಲ ಕರಾಯ, ಲೆತೀಫ್ ಹಾಜಿ ಗುರುವಾಯನಕೆರೆ, ಮುಸ್ತಫ ಗುರುವಾಯನಕೆರೆ, ನವಾಝ್ ಕಟ್ಟೆ, ನಿಸಾರ್ ಕುದ್ರಡ್ಕ, ರಮೀಝ್ ಬೆಳ್ತಂಗಡಿ, ಉಮರ್ ಜಿ.ಕೆ, ಶಮೀಮ್ ಯೂಸುಫ್ ಮದ್ದಡ್ಕ, ಅಶ್ರಫ್ ಆಲಿಕುಂಞಿ ಮುಂಡಾಜೆ, ಹನೀಫ್ ಪುಂಜಾಲಕಟ್ಟೆ, ಅಶ್ರಫ್ ಕಟ್ಟೆ, ಲೆತೀಫ್ ಪರಿಮ ಗೇರುಕಟ್ಟೆ, ಅಬ್ದುಲ್ ರಹಿಮಾನ್ ಪಡ್ಪು, ಸಾಲಿಹ್ ಮದ್ದಡ್ಕ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here