


ಬೆಳ್ತಂಗಡಿ: ಜನ ಮನ ಗೆದ್ದ ಪ್ರಖ್ಯಾತ ಜವುಳಿ ಮಳಿಗೆ ಆನ್ ಸಿಲ್ಕ್ಸ್ ನ ಸಹ ಸಂಸ್ಥೆ ಬೆಳ್ತಂಗಡಿ ತಾಲೂಕಿಗೆ ಪ್ರಪ್ರಥಮವಾಗಿ ಉದ್ಘಾಟನೆಗೊಂಡಿರುವ ಹೋಲ್ ಸೇಲ್ ಹಾಗೂ ರಖo ಪ್ರಖ್ಯಾತ ಪ್ಲೈವುಡ್ ಮಳಿಗೆ ಆನ್ ಫ್ಲೈ ಲಾಯಿಲ ಸಿಕ್ವೇರಾ ಕಾಂಪೌಂಡ್ ವಿ.ಆರ್.ಎಲ್. ಕಚೇರಿ ಹತ್ತಿರ ನ.8ರಂದು ಉದ್ಘಾಟನೆಗೊಂಡಿದೆ.
ಬೆಳ್ತಂಗಡಿ ಧರ್ಮ ಪ್ರಾಂತ್ಯದ ವಿಶ್ರಾಂತ ಧರ್ಮಾಧ್ಯಕ್ಷ ಡಾ| ಲಾರೆನ್ಸ್ ಮುಕ್ಕುಯಿ ಹಾಗೂ ಗಣ್ಯರು ಉಪಸ್ಥಿತರಿದ್ದರು. ಬೆಳ್ತಂಗಡಿ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷ ಡಾ.ಜೇಮ್ಸ್ ಪಟ್ಟೇರಿಲ್ ಉದ್ಘಾಟಿಸಿ, ಶುಭ ಹಾರೈಸಿದರು.



ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಶಾಸಕ ಕೆ. ಪ್ರತಾಪಸಿಂಹ ನಾಯಕ್, ಮಂಗಳೂರು ವಿದ್ಯುತ್ ಸರಬರಾಜು ನಿಗಮ ಅಧ್ಯಕ್ಷ ಕೆ. ಹರೀಶ್ ಕುಮಾರ್, ಬದ್ಯಾರು ಸೈಂಟ್ ರಫಯೇಲ್ ಚರ್ಚ್ ಧರ್ಮಗುರು ಫಾ। ರೋಶನ್ ಕ್ರಾಸ್ತ, ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಅಧ್ಯಕ್ಷ ಸುರೇಶ್ ಬಂಗೇರ ಎಂ.ಡಿ., ಬೆಳ್ತಂಗಡಿ ವರ್ತಕರ ಸಂಘದ ಅಧ್ಯಕ್ಷ ರೋನಾಲ್ಡ್ ಲೋಬೋ, ಬೆಳ್ತಂಗಡಿ ದಾರುಸ್ಸಲಾಂ ಎಜ್ಯುಕೇಶನ್ ಸೆಂಟರ್ ನ ಚೇಯರ್‌ಮೆನ್ ಸೈಯದ್ ಝೆಯಿನುಲ್ ಆಬಿದೀನ್ ಜಿಫ್ರಿ ತಂಳ್ ತಂಜಗಳ್, ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ, ಲಾಯಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ, ಸಿಕ್ವೆರಾ ಕಾಂಪ್ಲೆಕ್ಸ್ ಮಾಲಕ ಕ್ಲಿಟಸ್ ವಿಜಯ್ ವಿಲ್ಫ್ರೇಡ್ ಸಿಕ್ವೇರಾ, ಬೆಳ್ತಂಗಡಿ ಡಯಾಸಿಸ್ ಕೆಸಿಸಿಡಿಸಿ ಸಂಯೋಜಕ ಜೈಸನ್ ಪಟ್ಟೆರಿ, ಬೆಳ್ತಂಗಡಿ ಘಟಕ ಕೆಎಸ್.ಎಂ.ಸಿ.ಎ. ಅಧ್ಯಕ್ಷ ರೆಜಿ ಜಾರ್ಜ್ ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕರಾದ ಯೇಸುದಾಸ್ ಎನ್.ಜೆ ಮತ್ತು ಡೈನಾ ಬಂದ ಅತಿಥಿಗಳನ್ನು ಗೌರವಿಸಿದರು.
ಲಭ್ಯ ವಿರುವ ಉತ್ಪನ್ನಗಳು: ಪ್ಲೈವುಡ್, ಬ್ಲಾಕ್ ಬೋರ್ಡ್, ಫ್ಲಶ್ ಡೋರ್, ಲ್ಯಾಮಿನೇಟ್, ಹಾರ್ಡ್‌ವೇರ್, ವಿನೀರ್, MDF & HDMR ಬೋರ್ಡ್‌ಗಳು, PVC ಫೋಮ್ ಬೋರ್ಡ್, WPC ಬಾಗಿಲು ಮತ್ತು ಚೌಕಟ್ಟು, ಪೊರೆಯ ಬಾಗಿಲು, WPC ಬೋರ್ಡ್‌ಗಳು, ಪಾರ್ಟಿಕಲ್ ಬೋರ್ಡ್ ಗಳು ಹೋಲ್ ಸೇಲ್ ಹಾಗೂ ರಕಂ ದರದಲ್ಲಿ ಲಭ್ಯ.









