


ಉಜಿರೆ: ಎಸ್.ಡಿ.ಎಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥಾಪನಾ ದಿನಾಚರಣೆ ಮತ್ತು ಧ್ವಜ ದಿನಾಚರಣೆ ನ.7ರಂದು ಆಚರಿಸಲಾಯಿತು.
ಭಾರತವು ಸ್ವಾತಂತ್ರ್ಯ ಪಡೆದ ನಂತರ ನಡೆದ ಸಂಸ್ಥೆಗಳ ವಿಲೀನದ ಫಲವಾಗಿ, ನ.7, 1950ರಂದು “ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್” ಎಂಬ ಏಕೀಕೃತ ಸಂಸ್ಥೆ ಸ್ಥಾಪಿತವಾಯಿತು. ಈ ಹಿನ್ನೆಲೆ, ಪ್ರತಿವರ್ಷ ದೇಶದಾದ್ಯಂತ ಸಂಸ್ಥಾಪನಾ ದಿನಾಚರಣೆ ಹಾಗೂ ಧ್ವಜ ದಿನಾಚರಣೆ ಉತ್ಸಾಹಭರಿತವಾಗಿ ಆಚರಿಸಲಾಗುತ್ತದೆ.


ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆಯಿಂದ ಕಳುಹಿಸಲಾದ ಸಂಸ್ಥಾಪನಾ ದಿನಾಚರಣೆಯ ಧ್ವಜ ಚೀಟಿಯನ್ನು ಬೆಳ್ತಂಗಡಿ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಪ್ರಮೀಳಾ ಅವರು ಶಾಲೆಗೆ ಹಸ್ತಾಂತರಿಸಿದರು. ಶಾಲೆಯಿಂದ ಆ ಧ್ವಜ ಚೀಟಿಯನ್ನು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಅವರಿಗೆ ತಮ್ಮ ಕಾರ್ಯಾಲಯದಲ್ಲಿ ನೀಡಿ ಗೌರವಿಸಿ, ನಂತರ ಶಾಲಾ ವಿದ್ಯಾರ್ಥಿಗಳಿಗೆ ನೀಡಲಾಯಿತು.
ಕಾರ್ಯಕ್ರಮವು ದೇಶಭಕ್ತಿಯ ಉತ್ಸಾಹದಿಂದ ನೆರವೇರಿದ್ದು, ಸ್ಕೌಟ್ಸ್ ಮತ್ತು ಗೈಡ್ಸ್ ಚಳುವಳಿಯ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬಿತ್ತುವ ಪ್ರಯತ್ನವಾಯಿತು. ಶಿಕ್ಷಕಿ ಶಮೀಮ್ ದಿನದ ಮಹತ್ವದ ಕುರಿತು ತಿಳಿಸಿ, ಶಿಕ್ಷಕಿ ನಯನಾ ಕಾರ್ಯಕ್ರಮ ನಿರೂಪಿಸಿದರು.









