23ನೇ ರಾಜ್ಯ ಮಟ್ಟದ ಅಂಚೆ-ಕುಂಚ ಸ್ಪರ್ಧೆ

0

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಪ್ರತಿವರ್ಷ ರಾಜ್ಯ ಮಟ್ಟದ ಅಂಚೆ-ಕುಂಚ ಸ್ಪರ್ಧೆಯನ್ನು ನಡೆಸಿಕೊಂಡು ಬರುತ್ತಿದ್ದು, ಈ ವರ್ಷ 23ನೇ ರಾಜ್ಯ ಮಟ್ಟದ ಅಂಚೆ-ಕುಂಚ ಸ್ಪರ್ಧೆಗೆ ನೀಡಿರುವ ವಿಷಯ ‘ಪ್ರಕೃತಿಯ ಸೊಬಗು’ ಸ್ಪರ್ಧೆಯು ಪ್ರಾಥಮಿಕ ಶಾಲಾ ವಿಭಾಗ, ಪ್ರೌಢ ಶಾಲಾ ವಿಭಾಗ, ಕಾಲೇಜು ವಿಭಾಗ ಹಾಗೂ ಸಾರ್ವಜನಿಕ ವಿಭಾಗ ಎಂದು ಪ್ರತ್ಯೇಕ 4 ವಿಭಾಗಗಳಲ್ಲಿ ನಡೆಯಲಿದೆ.

ಪ್ರಕೃತಿಯ ಅತೀ ಸುಂದರವಾದ ದೃಶ್ಯಗಳನ್ನು ಬಿಡಿಸಿ ಕಳುಹಿಸಬಹುದು. 204 ಸೆಂ.ಮೀ ಗಾತ್ರದ ಡ್ರಾಯಿಂಗ್ ಶೀಟ್ ಅಥವಾ ಅಂಚೆ ಕಾರ್ಡಿನಲಿ, ಪೆನ್ಸಿಲ್/ ಇಂಡಿಯನ್ ಇಂಕ್, ಜಲವರ್ಣ ಬಳಸಿ ಚಿತ್ರ ಬಿಡಿಸುವುದು. ಶಾಲಾ/ಕಾಲೇಜು ವಿಭಾಗದವರು ಶಾಲಾ ಮುದ್ರೆ ಹಾಗೂ ಮುಖ್ಯಸ್ಥರ ಸಹಿ, ತಮ್ಮ ಪೂರ್ಣ ವಿಳಾಸ ಹಾಗೂ ದೂರವಾಣಿ ಸಂಖ್ಯೆಯೊಂದಿಗೆ ನಿರ್ದೇಶಕರು, ಅಂಚೆ-ಕುಂಚ ವಿಭಾಗ, ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್, ಶ್ರೀ ಕ್ಷೇತ್ರ ಧರ್ಮಸ್ಥಳ-574 216 ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ, ಇವರಿಗೆ ದಿನಾಂಕ: 31.03.2026 ಒಳಗಾಗಿ ಕಳುಹಿಸಬೇಕು. ಸ್ಪರ್ಧಾ ವಿಜೇತರಿಗೆ ನಗದು ಬಹುಮಾನ, ಪ್ರಮಾಣಪತ್ರ ಹಾಗೂ ಸ್ಮರಣಿಕೆ ನೀಡಿ ಪುರಸ್ಕರಿಸಲಾಗುವುದು ಎಂದು ಪ್ರಕಟಣೆಯಲ್ಲಿ ಕೋರಲಾಗಿದೆ.

LEAVE A REPLY

Please enter your comment!
Please enter your name here