




ಪಟ್ರಮೆ: ಗ್ರಾಮದ ನೇಲ್ಯಡ್ಕ, ಹಿಮರಡ್ಕ ಕೋಡಂದೂರು ಇನ್ನೂ ಹಲವು ಕಡೆ ಗಜಪಡೆ ನ. 7ರಂದು ದಾಳಿ ಮಾಡಿದ್ದು ಅನೇಕ ಗ್ರಾಮಸ್ಥರ ಕೃಷಿ ನಾಶವಾಗಿದೆ. ಗಜಪಡೆ ದಿನನಿತ್ಯ ಈ ಭಾಗದಲ್ಲಿ ಸಂಚಾರ ಮಾಡುತ್ತಿದ್ದು ಜನರು ಕೃಷಿ ನಾಶವಾಗುವ ಭೀತಿಯಲ್ಲಿದ್ದಾರೆ. ಅರಣ್ಯ ಇಲಾಖೆಯವರು ಬಡ ಕೃಷಿಕರನ್ನು ಒಕ್ಕಲೆಬ್ಬಿಸುವ ಬದಲು ಈ ಆನೆಯನ್ನು ಒಕ್ಕಲೆಬ್ಬಿಸಿದರೆ ನೆಮ್ಮದಿಯಿಂದ ಜೀವನ ಮಾಡಬಹುದು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.









