


ಬೆಳ್ತಂಗಡಿ: ತಾಲೂಕಿನ ಆರಂಬೋಡಿ ಗ್ರಾಮದ ಹಕ್ಕೇರಿ ಕಂಬಳದಡ್ಡ ಸಂಪಾ ಶೆಟ್ಟಿ ಅವರ ಮಗಳು ಸುರಕ್ಷಾ ಶೆಟ್ಟಿ ಅವರು ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.


ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಸಿ.ಎ. ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಸುರಕ್ಷಾ ಶೆಟ್ಟಿ ಸರಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತ ಗ್ರಾಮೀಣ ಪ್ರತಿಭೆ. ಇದೀಗ ಸಿ.ಎ. ಪದವಿ ಪಡೆದು ತನ್ನ ಊರು, ತಾನು ಕಲಿತ ಶಾಲೆಗೆ ಕೀರ್ತಿ ತಂದಿದ್ದಾರೆ.









