ಬಳ್ಳಮಂಜ: ಶ್ರೀ ಅನಂತೇಶ್ವರ ಸ್ವಾಮಿ ಭಜನಾ ಮಂಡಳಿಯ 48ನೇ ವರ್ಷದ ಭಜನಾ ಸಪ್ತಾಹ

0

ಬಳ್ಳಮಂಜ: ಶ್ರೀ ಅನಂತೇಶ್ವರ ಸ್ವಾಮಿ ಭಜನಾ ಮಂಡಳಿಯ 48ನೇ ವರ್ಷದ ಭಜನಾ ಸಪ್ತಾಹ ಅ.30ರಿಂದ ನ.6ರವರೆಗೆ ಭಜನೆಯೊಂದಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಧಾರ್ಮಿಕ ಸಭಾ ಕಾರ್ಯಕ್ರಮದ ಧಾರ್ಮಿಕ ಉಪನ್ಯಾಸಕರಾಗಿ ಶ್ರೀ ದೇವಾಲಯದ ತಂತ್ರಿಗಳಾದ ಉಡುಪಿ ಸಂಸ್ಕೃತ ಮಹಾವಿದ್ಯಾಲಯದ ಜ್ಯೋತಿಷ್ಯ ಶಾಸ್ತ್ರ ಪ್ರಾಧ್ಯಾಪಕ ಬ್ರಹ್ಮಶ್ರೀ ಬೇರೆಬೈಲು ಡಾ. ಶಿವಪ್ರಸಾದ್ ತಂತ್ರಿ ಅವರು ಮಾತನಾಡಿ ದೇವರ ನಾಮ ಸ್ಮರಣೆಯಿಂದ ಸಿಗುವ ಪುಣ್ಯದ ಫಲ ಬೇರೆ ಯಾವುದರಲ್ಲೂ ಸಿಗಲು ಸಾಧ್ಯವಿಲ್ಲ. ದೇವರನ್ನು ಭಕ್ತಿಯಿಂದ ಕೊಂಡಾಡಲು ಭಜನೆಯಿಂದ ಮಾತ್ರ ಸಾಧ್ಯ ಎಂದರು.

ವೇದಿಕೆಯಲ್ಲಿ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ. ಹರ್ಷ ಸಂಪಿಗೆತ್ತಾಯ, ಭಜನಾ ಮಂಡಳಿಯ ಅಧ್ಯಕ್ಷ ಪುಷ್ಪಕ ರಾವ್ ಉಪಸಿದ್ಧರಿದ್ದರು. ಮಚ್ಚಿನ ಪ್ರೌಢ ಶಾಲೆ ಹಾಗೂ ವಿದ್ಯಾಸಾಗರ CBSE ಯ SSLCಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಭಜನಾ ಮಂಡಳಿಯ ಮುಖ್ಯ ಸಲಹೆಗಾರ ಬಾಲಕೃಷ್ಣ ಭಟ್ ಸ್ವಾಗತಿಸಿದರು. ಧನುಷ್ ವಾರ್ಷಿಕ ವರದಿ ಮಂಡಿಸಿದರು. ಯತೀಶ್ ರೈ ವಂದಿಸಿದರು. ಹರ್ಷ ಬಳ್ಳಮಂಜ ಕಾರ್ಯಕ್ರಮ ನಿರೂಪಿಸಿದರು. 48 ಗಂಟೆಗಳ ಅಖಂಡ ಭಜನೆಯೊಂದಿಗೆ ವಿವಿಧ ಬಜನಾ ತಂಡಗಳಿಂದ ಭಜನಾ ಸೇವೆ ನಡೆಯಿತು. ಶ್ರೀ ದೇವರಿಗೆ ರಂಗಪೂಜೆ, ದೀಪೋತ್ಸವ, ವಿಶೇಷ ಪೂಜೆ ನಡೆಯಿತು. ಭಜನಾ ಕಾರ್ಯಕ್ರಮದಲ್ಲಿ ಊರ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.. ✍️ವರದಿ. ಹರ್ಷ ಬಳ್ಳಮಂಜ

LEAVE A REPLY

Please enter your comment!
Please enter your name here