ಉಜಿರೆ: ಎಸ್‌.ಡಿ.ಎಂ. ಪಾಲಿಟೆಕ್ನಿಕ್ ನಲ್ಲಿ ಬೋಶ್ ಇಂಟರ್ನ್‌ಶಿಪ್ ಆಯ್ಕೆ ಪ್ರಕ್ರಿಯೆ

0

ಉಜಿರೆ: ಬೆಂಗಳೂರು ಬೋಶ್ ಆಟೋಮೊಟಿವ್ ಎಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಎಂಬ ವಿಶ್ವ ಪ್ರಸಿದ್ಧ ಬಹುರಾಷ್ಟ್ರೀಯ ಕಂಪನಿಯು ಎಸ್‌.ಡಿ.ಎಂ ಪಾಲಿಟೆಕ್ನಿಕ್ ನಲ್ಲಿ ಯಶಸ್ವಿಯಾಗಿ ಇಂಟರ್ನ್‌ಶಿಪ್ ಆಯ್ಕೆ ಪ್ರಕ್ರಿಯೆಯನ್ನು ನ. 3ರಂದು ನಡೆಸಿತು.

ಈ ಆಯ್ಕೆ ಪ್ರಕ್ರಿಯೆ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮತ್ತು ಎಲೆಕ್ಟ್ರಾನಿಕ್ಸ್ ಹಾಗೂ ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಯಿತು. ಒಟ್ಟು 25 ಮಂದಿ ವಿದ್ಯಾರ್ಥಿಗಳು ಈ ಪ್ರಕ್ರಿಯೆಯಲ್ಲಿ ಭಾಗವಹಿಸಿದರು.

ಬೋಶ್ ಕಂಪನಿಯ ಮಾನವ ಸಂಪನ್ಮೂಲ (HR) ಪ್ರತಿನಿಧಿಗಳಾದ ಪ್ರದೀಪ್ ಹಾಗೂ ಧೀರಜ್ ಶೆಟ್ಟಿಗಾರ್, ತಮ್ಮ ತಂಡದೊಂದಿಗೆ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿ, ಕೈಗಾರಿಕಾ ಪ್ರಕ್ರಿಯೆಗಳು, ಕೆಲಸದ ಸಂಸ್ಕೃತಿ ಮತ್ತು ಆಟೋಮೊಟಿವ್ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿನ ಅವಕಾಶಗಳ ಬಗ್ಗೆ ಅಮೂಲ್ಯ ಮಾಹಿತಿಯನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಸಂತೋಷ ಅವರು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಮಾತುಗಳನ್ನು ನೀಡಿ, ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ನೀಡಿದರು.

ಪ್ಲೇಸ್ಮೆಂಟ್ ಸಮಿತಿ ಸದಸ್ಯ ಶಿವರಾಜ್ ಪಿ. ಅವರು ಅತಿಥಿಗಳನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು. ಹಾಗೂ ಶಾದ್ವಲ ಸೆಬಾಸ್ಟಿಯನ್, ಅಶೋಕ್ ಮತ್ತು ವಿದ್ಯಾಲಕ್ಷ್ಮಿ ಅವರು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಸಹಕರಿಸಿದರು.

LEAVE A REPLY

Please enter your comment!
Please enter your name here