




ಬೆಳ್ತಂಗಡಿ: ರಾಷ್ಡ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ನಿಮಿತ್ತ ಬೆಳ್ತಂಗಡಿ ತಾಲೂಕು ಪಥಸಂಚಲನ ಬೆಳ್ತಂಗಡಿ ಪಟ್ಟಣದಲ್ಲಿ ಅ. 27ರಂದು ಬೆಳಿಗ್ಗೆ ನಡೆಯಿತು. ಗಣವೇಷಧಾರಿ ಸ್ವಯಂಸೇವಕರ ಘೋಷ್ ಸಹಿತ ಆಕರ್ಷಕ ಪಥಸಂಚಲನ ಜೂನಿಯರ್ ಕಾಲೇಜು ಬಳಿಯಿಂದ ಹೊರಟು, ತಾಲೂಕು ಬಸ್‌ನಿಲ್ದಾಣ, ತಾಲೂಕು ಕಚೇರಿ ಮೂಲಕ ಬಂದು ಎಸ್.ಡಿ.ಎಂ. ಪ್ರೌಢಶಾಲಾ ಕ್ರೀಡಾಂಗಣದಲ್ಲಿ ಕೊನೆಗೊಂಡಿತು.









