ಬೆಳ್ತಂಗಡಿ: ತಾಲೂಕು ಮತ್ತು ಗ್ರಾಮ ಸಮಿತಿ ರೈತ ಸದಸ್ಯರ ಪ್ರಶಿಕ್ಷಣ ವರ್ಗ ಕಾರ್ಯಕ್ರಮ

0

ಬೆಳ್ತಂಗಡಿ: ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ಕರ್ನಾಟಕ ದಕ್ಷಿಣ ಪ್ರಾಂತ, ದಕ್ಷಿಣ ಕನ್ನಡ ಜಿಲ್ಲೆ, ಬೆಳ್ತಂಗಡಿ ತಾಲೂಕಿನ ತಾಲೂಕು ಮತ್ತು ಗ್ರಾಮ ಸಮಿತಿ ರೈತ ಸದಸ್ಯರ ಪ್ರಶಿಕ್ಷಣ ವರ್ಗ ಸುಲ್ಕೇರಿ ಶ್ರೀ ರಾಮ ಶಾಲೆಯಲ್ಲಿ ಅ.26ರಂದು ಬೆಳಿಗ್ಗೆ ಗಂಟೆ 9ರಿಂದ ಸಂಜೆ 4ರವರೆಗೆ ನಡೆಯಿತು.

ಕಾರ್ಯಕ್ರಮವು ಗೋಪೂಜೆಯ ಮುಖಾಂತರ ಪ್ರಾರಂಭಗೊಂಡು ಕಾರ್ಯಕ್ರಮದ ಅಧ್ಯಕ್ಷರು, ಭಾರತೀಯ ಕಿಸಾನ್ ಸಂಘ ಬೆಳ್ತಂಗಡಿ ತಾಲೂಕಿನ ಅಧ್ಯಕ್ಷ ಎಸ್. ಆರ್. ಭಾಸ್ಕರ್ ಶಿರ್ಲಾಲು ಅವರು ಧ್ವಜಾರೋಹಣಗೈವುವ ಮೂಲಕ ಕಾರ್ಯಕ್ರಮವನ್ನು ಚಾಲನೆಗೊಳಿಸಿದರು.

ಮುಖ್ಯ ಅತಿಥಿಗಳಾಗಿ ಸುಲ್ಕೇರಿ ಶ್ರೀರಾಮ ಶಾಲೆ ಅಧ್ಯಕ್ಷ ರಾಜು ಪೂಜಾರಿ, ಕರ್ನಾಟಕ ರಾಜ್ಯ ಭಾರತೀಯ ಕಿಸಾನ್ ಸಂಘದ ರಾಜ್ಯಾಧ್ಯಕ್ಷ ಭೀಮ ಸೇನಾ ಕೊಕರೆ, ಕರ್ನಾಟಕ ರಾಜ್ಯ ಸಂಘಟನಾ ಕಾರ್ಯದರ್ಶಿ ಪುಟ್ಟಸ್ವಾಮಿ, ಕರ್ನಾಟಕ ದಕ್ಷಿಣ ಪ್ರಾಂತ್ಯ ಅಧ್ಯಕ್ಷ ರಮೇಶ್ ರಾಜು, ಸಂಘಟನಾ ಕಾರ್ಯದರ್ಶಿ ನಾರಾಯಣಸ್ವಾಮಿ, ಮಹಿಳಾ ಪ್ರಮುಖರು ಪುಟ್ಟಮ್ಮ, ಕರ್ನಾಟಕ ದಕ್ಷಿಣ ಪ್ರಾಂತ್ಯ ಪ್ರತಿನಿಧಿ ಸುಬ್ರಾಯ ಬಿ.ಎಸ್., ದಕ್ಷಿಣ ಕನ್ನಡ ಜಿಲ್ಲೆಯ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಸತ್ಯನಾರಾಯಣ ಭಟ್, ಪ್ರಧಾನ ಕಾರ್ಯದರ್ಶಿ ಅಂಬುಜಾಕ್ಷ, ಮಹಿಳಾ ಪ್ರಮುಖರು ಶಾಂಭವಿ, ದಕ್ಷಿಣ ಕನ್ನಡ ಜಿಲ್ಲಾ ಭಾರತೀಯ ಕಿಸಾನ್ ಸಂಘದ ಪ್ರತಿನಿಧಿ ಶಿವಾನಂದ ಹೆಗಡೆ ಕರಂಬಾರು, ಉಪಾಧ್ಯಕ್ಷ ಜಯ ಸಾಲಿಯಾನ್, ಮಾಧ್ಯಮ ಪ್ರಮುಖರು ವಿಜಯಕುಮಾರ್ ಜೈನ್ ನಾವರ, ಮಹಿಳಾ ಪ್ರಮುಖರು ಶೀಲಾ, ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ರೈತ ಗೀತೆಯನ್ನು ಬಳಂಜ ಗ್ರಾಮದ ಪ್ರವೀಣ್ ದೇವಾಡಿಗ, ರತ್ನಾಕರ ಶೆಟ್ಟಿ ಪ್ರದೀಪ ಅವರು ಹಾಡಿದರು. ದೇವಿ ಪ್ರಸಾದ್ ಅರ್ವ ಹಾಗೂ ತಾಲೂಕು ಭಾರತೀಯ ಕಿಸಾನ್ ಸಂಘದ ಪ್ರಧಾನ ಕಾರ್ಯದರ್ಶಿ ಲಿಂಗಪ್ಪನಾಯ್ಕ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಬಂದ ಅತಿಥಿಗಳನ್ನು ತಾಲೂಕು ಭಾರತೀಯ ಕಿಸಾನ್ ಸಂಘದ ಉಪಾಧ್ಯಕ್ಷ ಜಯ ಸಾಲಿಯಾನ್ ಅವರು ಸ್ವಾಗತಿಸಿದರು. ಬೆಳ್ತಂಗಡಿ ತಾಲೂಕಿನ ಸುಮಾರು 42 ಗ್ರಾಮಗಳ ಸುಮಾರು 200 ರೈತ ಸದಸ್ಯರು ಭಾಗವಹಿಸಿ ತರಬೇತಿಯನ್ನು ಪಡೆದರು. ಲಯನ್ ನಿತ್ಯಾನಂದ ನಾವರ ಅವರ ಧನ್ಯವಾದದೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.

LEAVE A REPLY

Please enter your comment!
Please enter your name here