ಕಲ್ಮಂಜ: ಬೆಳ್ತಂಗಡಿ ರೋಟರೀ ಕ್ಲಬ್ ನ ಅಂಗ ಸಂಸ್ಥೆಯಾದ ರೋಟರಿ ಸಮುದಾಯ ದಳ (ಆರ್.ಸಿ.ಸಿ) ಕಲ್ಮಂಜ, ಮುಂಡಾಜೆ, ಕರ್ಕಿಂಜೆ ಹಾಗೂ ನೆರಿಯ ಘಟಕಗಳ ಪದಾಧಿಕಾರಿಗಳ ಆಯ್ಕೆ ಉಜಿರೆಯ ಓಶನ್ ಪರ್ಲ್ ನಲ್ಲಿ ಸೆ.6ರಂದು ನಡೆಯಿತು.
ಬೆಳ್ತಂಗಡಿ ರೋಟರೀ ಕ್ಲಬ್ ಅಧ್ಯಕ್ಷ ರೊ. ಪ್ರೊ. ಪ್ರಕಾಶ ಪ್ರಭು ಅಧ್ಯಕ್ಷತೆಯಲ್ಲಿ ಆರ್.ಸಿ.ಸಿ ಕಲ್ಮಂಜ ಘಟಕದ ಅಧ್ಯಕ್ಷರಾಗಿ ನಾಗೇಶ್ ಕಲ್ಮಂಜ, ಕಾರ್ಯದರ್ಶಿಯಾಗಿ ದಿನೇಶ ಗೌಡ ಬನದ ಬೈಲು ಮತ್ತು ಕೋಶಾಧಿಕಾರಿಯಾಗಿ ಡಿ. ಜಯಂತ್ ರಾವ್ ಆಯ್ಕೆಯಾದರು. ಕಳೆದ ವರ್ಷದ ಆರ್.ಸಿ.ಸಿ ಕಲ್ಮಂಜದ ಅಧ್ಯಕ್ಷ ಸತೀಶ್ ಭಟ್ ತಂತ್ಯಾ ಅವರಿಂದ ನಾಗೇಶ ಕಲ್ಮಂಜ ಅವರಿಗೆ ಅಧಿಕಾರ ಹಸ್ತಾಂತರಿಸುವ ಪದಗ್ರಹಣ ಸಮಾರಂಭವನ್ನು ಸೆ. 20ರಂದು ಮುಂಡಾಜೆಯಲ್ಲಿ ನಡೆಸುವುದೆಂದು ನಿರ್ಣಯಿಸಲಾಯಿತು.