ನಾವೂರು: ಗ್ರಾಮ ಪಂಚಾಯತ್ ಮತ್ತು ಅಂಚೆ ಇಲಾಖೆ ಪುತ್ತೂರು ವಿಭಾಗದಿಂದ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಆಧಾರ್ ಕಾರ್ಡ್ ಪರಿಷ್ಕರಣೆ, ತಿದ್ದುಪಡಿ, ಹೊಸ ಆಧಾರ್ ಕಾರ್ಡ್ ನೋಂದಾವಣೆ ಶಿಬಿರವು ಸೆ.22 ಮತ್ತು 23ರಂದು 2 ದಿನ ನಡೆಯಿತು.

ಕಾರ್ಯಕ್ರಮದಲ್ಲಿ ನಾವೂರು, ನಡ, ಇಂದಬೆಟ್ಟು, ಮಿತ್ತಬಾಗಿಲು ಗ್ರಾಮದ ಸುಮಾರು 100ಕ್ಕೂ ಮಿಕ್ಕಿ ಜನರು ಇದರ ಸದುಪಯೋಗ ಪಡೆದುಕೊಂಡರು. ಸದ್ರಿ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ನ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಅಂಚೆ ಇಲಾಖೆಯ ಸಿಬ್ಬಂದಿ, ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗದವರು ಉಪಸ್ಧಿತರಿದ್ದರು.