ಬೆಳಾಲು: ಇತ್ತೀಚಿಗೆ ನಿಧನರಾದ ಬೆಳಾಲು ಯುವ ಬಿಲ್ಲವ ವೇದಿಕೆ ಮತ್ತು ಕೋಟಿ ಚೆನ್ನಯ್ಯ ಕ್ರೀಡಾ ಸಮಿತಿಯ ಮಾಜಿ ಅಧ್ಯಕ್ಷರು ಯುವವಾಹಿನಿ ಬೆಳ್ತಂಗಡಿ ಘಟಕದ ಸಲಹೆಗಾರ ಉಮನಾಥ ಕೋಟ್ಯಾನ್ ಬೆಳಾಲು ಅವರಿಗೆ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಮಿತಿ ಬೆಳಾಲು, ಯುವ ಬಿಲ್ಲವ ವೇದಿಕೆ, ಬಿಲ್ಲವ ಮಹಿಳಾ ವೇದಿಕೆಯಿಂದ ಬೆಳಾಲಿನಲ್ಲಿ ನುಡಿನಮನ ನಡೆಸಿ ಅವರಿಗೆ ಗೌರವ ಸಲ್ಲಿಸಲಾಯಿತು.
ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷ ನಿವೃತ್ತ ಕೃಷಿ ಅಧಿಕಾರಿ ನಾರಾಯಣ ಸುವರ್ಣ ನುಡಿನಮನ ಸಲ್ಲಿಸಿದರು. ಅಧ್ಯಕ್ಷ ನಾಣ್ಯಪ್ಪ ಪೂಜಾರಿ, ಕಾರ್ಯದರ್ಶಿ ಹಾಗೂ ಬೆಳ್ತಂಗಡಿ ಸಂಘದ ಜತೆ ಕಾರ್ಯದರ್ಶಿ ಸಂತೋಷ್ ಉಪ್ಪಾರು, ಬೆಳಾಲು ಗ್ರಾಮ ಪಂಚಾಯತ್ ಸದಸ್ಯ ದಿನೇಶ್ ಕೋಟ್ಯಾನ್, ಯಕ್ಷಗಾನ ಅಕಾಡೆಮಿ ಸದಸ್ಯ ದಯಾನಂದ ಪಿ., ಸಂಘದ ಗೌರವಾಧ್ಯ ಕ್ಷ ರಮೇಶ್ ಪೂಜಾರಿ ಗುಂಡ್ಯ ಮಾಜಿ ಅಧ್ಯಕ್ಷ ಪುರುಷೋತ್ತಮ ಕೋಟ್ಯಾನ್, ಕೋಟಿ ಚೆನ್ನಯ ಕ್ರೀಡಾ ಸಮಿತಿ ಅಧ್ಯಕ್ಷ ಶಶಿಧರ ಓಡಿಪ್ರೊಟ್ಟು, ಯುವಬಿಲ್ಲವ ವೇದಿಕೆ ಅಧ್ಯಕ್ಷ ಅವಿನಾಶ್, ಕಾರ್ಯದರ್ಶಿ ಪ್ರವೀಣ್ ಕಪ್ಪೆಹಳ್ಳ, ಮಾಜಿ ಅಧ್ಯಕ್ಷ ದಾಮೋದರ, ಸದಸ್ಯರಾದ ವಿಶ್ವನಾಥ ಬಾಯಿತರಡ್ಡ, ಅಭಿಜಿತ್, ಉಮಾನಾಥ ಅವರ ಸಹೋದರ ಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು.