ಬೆಳ್ತಂಗಡಿ: ರಾಜ ಕೇಸರಿ ಸೇವಾ ಟ್ರಸ್ಟ್ ಕರ್ನಾಟಕ ಇದರ ಸಂಸ್ಥಾಪಕ ದೀಪಕ್ ಜಿ. ಬೆಳ್ತಂಗಡಿ ಅವರ ನೇತೃತ್ವದಲ್ಲಿ ಯೇನಪೋಯ ಮೆಡಿಕಲ್ ಕಾಲೇಜ್ ಆಸ್ಪತ್ರೆ ದೇರಳಕಟ್ಟೆ ಪ್ರಸಾದ್ ನೇತ್ರಾಲಯ ಉಡುಪಿ ಮತ್ತು ಶ್ರೀದೇವಿ ಆಪ್ಟಿಕಲ್ಸ್ ಸಂತಕಟ್ಟೆ ಇವರ ಜಂಟಿ ಆಶ್ರಯದಲ್ಲಿ 580ನೇ ಸೇವಾ ಯೋಜನೆ ಬೃಹತ್ ಉಚಿತ ನೇತ್ರಾ ಮತ್ತು ಹೃದಯ ತಪಾಸಣಾ ಶಿಬಿರ ಸೆ. 28ರಂದು ಬೆಳಿಗ್ಗೆ 9:30ರಿಂದ ನಾವೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.
ಶಿಬಿರದ ವಿಶೇಷತೆ:
- ಶಿಬಿರದಲ್ಲಿ ಇಸಿಜಿ ಲಭ್ಯ ಮತ್ತು ಕಣ್ಣಿನ ಸಂಪೂರ್ಣ ತಪಾಸಣೆ ನಡೆಸಲಾಗುವುದು.
- ಕಣ್ಣಿನ ಪೊರೆ ಶಸ್ತ್ರಚಿಕಿಸೆಗೆ ಆಯ್ಕೆಯಾದವರಿಗೆ ಗೊತ್ತು ಬಳಿಸಿದ ದಿನಾಂಕದಂದು ಉಡುಪಿಯ ಪ್ರಸಾದ್ ನೇತ್ರಾಲಯ ಕಣ್ಣಿನ ಆಸ್ಪತ್ರೆಗೆ ತಮ್ಮದೇ ಆದ ವಾಹನದಲ್ಲಿ ಕರೆದುಕೊಂಡು ಹೋಗಿ ಶಸ್ತ್ರತಿಗೆ ಮಾಡಿಸಿ ಮರುದಿನ ವಾಪಸ್ ಕರೆತಂದು ಬಿಡಲಾಗುವುದು.
3.ಶಿಬಿರದಲ್ಲಿ ಕನ್ನಡಕದ ಅಗತ್ಯ ಇದ್ದವರಿಗೆ 1200 ರೂಪಾಯಿಗಳ ಕನ್ನಡಕವನ್ನು 500 ರೂಪಾಯಿ ನೀಡಲಾಗುವುದು. - ಶಿಬಿರದಲ್ಲಿ ಅಗತ್ಯವಿರುವ ಶಿಬಿರಾರ್ಥಿಗಳಿಗೆ ಔಷಧಿಗಳನ್ನು ಉಚಿತವಾಗಿ ವಿತರಿಸಲಾಗುವುದು.
ಸಭಾಧ್ಯಕ್ಷತೆಯನ್ನು ನಾವೂರು ಆರೋಗ್ಯ ಕ್ಲಿನಿಕ್ ಡಾ. ಪ್ರದೀಪ್ ಎ., ಅಧ್ಯಕ್ಷತೆಯನ್ನು ರಾಜ ಕೇಸರಿ ಸೇವಾ ಟ್ರಸ್ಟ್ ನ ಅಧ್ಯಕ್ಷ ಸತೀಶ್ ಕಂಗಿತ್ತಿಲ್ ವಹಿಸಲಿದ್ದಾರೆ. ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜ ಅವರು ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಧಾರ್ಮಿಕ ಪ್ರಮುಖ ಕಿರಣ್ ಚಂದ್ರ ಡಿ. ಪುಷ್ಪಗಿರಿ, ಮಂಗಳೂರು (ವಿಸ್ತಾರಣ ಮತ್ತು ಔಟ್ ರಿಚ್) ಯೇನಪೋಯ ವಿಶ್ವ ವಿದ್ಯಾಲಯ ನಿರ್ದೇಶಕಿ ಡಾ. ಅಶ್ವಿನಿ ಶೆಟ್ಟಿ, ನಾವೂರು ಮುರ ಖತೀಬ್ ಜುಮ್ಮ ಮಸೀದಿ ಧರ್ಮಗುರು ಬಶೀರ್ ಸಅದಿ ಕಮ್ಮಾರ, ನಾವೂರು ಬೆದ್ರಬೆಟ್ಟು ಚರ್ಚ್ ಧರ್ಮಗುರು ಸೆಬಾಸ್ಟಿಯನ್, ನಾವೂರು ಗ್ರಾಮ ಪಂಚಾಯತ್ ಸದಸ್ಯ ಗಣೇಶ್ ಗೌಡ, ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸಾದ್ ಶೆಟ್ಟಿ ಏಣಿಂಜೆ, ಉಜಿರೆ ಹಳೆಪೇಟೆ ಉದ್ಯಮಿ ಲಯನ್ ನಿತ್ಯಾನಂದ ನಾವೂರು, ನಾವೂರ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಉಮೇಶ್ ಪ್ರಭು, ಸಿ.ಎ. ಬ್ಯಾಂಕ್ ಅಧ್ಯಕ್ಷ ಹರೀಶ್ ಸಾಲ್ಯಾನ್, ಪಡು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಪ್ರವೀಣ್ ವಿ.ಜಿ., ಇಂದಬೆಟ್ಟು ಕಲ್ಲಾಜೆ ನವ ಭಾರತ ಗೆಳೆಯರ ಬಳಗದ ಅಧ್ಯಕ್ಷ ರಮೇಶ್ ನೋಜಲಾ, ನಾವೂರು ಎಸ್.ಡಿ.ಎಂ. ಶಾಲೆ ಅಧ್ಯಕ್ಷ ಕೃಷ್ಣಪ್ಪ ಗೌಡ, ಇಂದಬೆಟ್ಟು ಸುಧರ್ಮ ಆಟೋ ಚಾಲಕರ ಸಂಘದ ಅಧ್ಯಕ್ಷ ಹುಸೇನ್ ಸಾಹೇಬ್, ನಾವೂರು ಶಾಲೆ ಮುಖ್ಯ ಶಿಕ್ಷಕಿ ರೋಹಿಣಿ, ಸಂತೆಕಟ್ಟೆ ಶ್ರೀದೇವಿ ಆಪ್ಟಿಕಲ್ಸ್ ಮಾಲಕಿ ಮಂಜುಳಾ ಭಾಗವಹಿಸಲಿರುವರು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ: ಬೆಳ್ತಂಗಡಿ ತಾಲೂಕು ರಾಜ ಕೇಸರಿ ಸೇವಾ ಟ್ರಸ್ಟ್ ಅಧ್ಯಕ್ಷ ಸತೀಶ್ ಕಂಗಿತ್ತಿಲ್ಲ. ಮೊ : 9611577081
ಉಪಾಧ್ಯಕ್ಷ ಪ್ರವೀಣ್ ಪಿಂಟು ಸುರ್ಯ ಮೊ : 9740996797.