ಸೆ.23: ಬೆಳ್ತಂಗಡಿ ಸುನ್ನೀ ಕೋ-ಆರ್ಡಿನೇಶನ್ ಕಮಿಟಿಯಿಂದ “ಗ್ರ್ಯಾಂಡ್ ಹುಬ್ಬುರ್ರಸೂಲ್ ಮಜ್ಲಿಸ್‌” ವಿಶೇಷ ಮೌಲಿದ್ ಪಾರಾಯಣ ಹಾಗೂ ಬುರ್ದಾ ಕಾರ್ಯಕ್ರಮ- ಪತ್ರಿಕಾಗೋಷ್ಠಿ

0

ಬೆಳ್ತಂಗಡಿ: ಸುನ್ನೀ ಕೋ-ಆರ್ಡಿನೇಶನ್ ಕಮಿಟಿಯಿಂದ ಪ್ರವಾದಿ ಪೈಗಂಬರ್ ಅವರ 1500 ನೇ ಜನ್ಮದಿನಾಚರಣೆಯ ಪ್ರಯುಕ್ತ “ಗ್ರ್ಯಾಂಡ್ ಹುಬ್ಬುರ್ರಸೂಲ್ ಮಜ್ಲಿಸ್‌” ಎನ್ನುವ ವಿಶೇಷ ಮೌಲಿದ್ ಪಾರಾಯಣ ಹಾಗೂ ಬುರ್ದಾ ಕಾರ್ಯಕ್ರಮ ಸೆ.23ರಂದು ಗುರುವಾಯನಕೆರೆ ಮಂಜುಬೆಟ್ಟು ಎಫ್.ಎಮ್ ಗಾರ್ಡನ್ ನಲ್ಲಿ ಪೂರ್ವಾಹ್ನ 10:00 ಗಂಟೆಗೆ ಆಯೋಜಿಸಲಾಗಿದೆ ಎಂದು ಸುನ್ನೀ‌ ಕೋರ್ಡಿನೇಷನ್ ಕಮಿಟಿ ಉಪಾಧ್ಯಕ್ಷ ಸಿಟಿಎಂ ಉಮರ್ ಅಸ್ಸಖಾಫ್ ತಂಙಳ್ ಹೇಳಿದರು.

ನಗರದ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ವಿವರ ನೀಡಿದರು. ಸಭಾ ಕಾರ್ಯಕ್ರಮ ಹೊರತುಪಡಿಸಿದ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಪ್ರವಾದಿಯವರ ನಾಮಸಂಕೀರ್ತನೆಯ ಬುರ್ದಾ ಆಲಾಪನೆ ಹಾಗೂ ವಿಶೇಷ ಮೌಲಿದ್ ಪಾರಾಯಣ ಅದ್ದೂರಿಯಾಗಿ ನಡೆಯಲಿದೆ. ಇದೇ ಮೊದಲ ಬಾರಿಗೆ‌ ನಡೆಯುವ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಉಲೆಮಾ ಒಕ್ಕೂಟದ ಅಧ್ಯಕ್ಷ, ಉಡುಪಿ‌ ಚಿಕ್ಕಮಗಳೂರು ಸಂಯುಕ್ತ ಖಾಝಿ ಶೈಖುನಾ ಮಾಣಿ ಉಸ್ತಾದ್ ಸೇರಿದಂತೆ ಸಯ್ಯಿದ್ ಸಾದಾತ್ ತಂಙಳ್, ಸಯ್ಯಿದ್ ಇಸ್ಮಾಯಿಲ್ ತಂಙಳ್, ಸಯ್ಯಿದ್ ಕಾಜೂರು ತಂಙಳ್, ಸಯ್ಯಿದ್ ಮಲ್‌ಜ‌ಅ ತಂಙಳ್, ಸಯ್ಯಿದ್ ಮನ್ಶರ್ ತಂಙಳ್, ಸಯ್ಯಿದ್ ವಾದಿ ಇರ್ಫಾನ್ ತಂಙಳ್, ಸಯ್ಯಿದ್ ಅಬ್ದುಸ್ಸಲಾಂ ತಂಙಳ್, ಸಯ್ಯಿದ್ ಎಸ್.ಎಂ‌. ತಂಙಳ್, ಸಯ್ಯಿದ್ ಕರ್ಪಾಡಿ ತಂಙಳ್, ಸಯ್ಯಿದ್ ಪೊಮ್ಮಾಜೆ ತಂಙಳ್, ಸಯ್ಯಿದ್ ವೇಣೂರು ತಂಙಳ್, ಡಾ.‌ಕಾವಳಕಟ್ಟೆ ಹಝ್ರತ್, ಕಾಸಿಂ ಮದನಿ ಕರಾಯ, ಹೈದರ್ ಮದನಿ ಕರಾಯ, ಅಬೂಸ್ವಾಲಿಹ್ ಉಸ್ತಾದ್ ಕಿಲ್ಲೂರು,ಕೃಷ್ಣಾಪುರ ಇಬ್ರಾಹಿಂ ಮುಸ್ಲಿಯಾರ್, ಪಿ.ಪಿ‌. ಉಸ್ತಾದ್ ಕಾಶಿಪಟ್ಣ, ಪೆರ್ನೆ ಉಸ್ತಾದ್, ಯಾಕೂಬ್ ಉಸ್ತಾದ್ ಮದ್ದಡ್ಕ ಒಳಗೊಂಡಂತೆ ವಿದ್ವಾಂಸರು ವಿಶೇಷ ವೇದಿಕೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಆರಿಫ್ ಸ‌ಅದಿ ಬಳಗದವರು ಮದ್‌ಹ್ ಆಲಾಪನೆ ನಡೆಸಿಕೊಡಲಿದ್ದಾರೆ.

ಈ ಸಮಾರಂಭದಲ್ಲಿ ತಾಲೂಕಿನ ವಿವಿಧ ಮೊಹಲ್ಲಾಗಳ ಆಡಳಿತ ಮಂಡಳಿ ಪ್ರತಿನಿಧಿಗಳು ಮತ್ತು ಜಮಾಅತ್ ಬಾಂಧವರು, ಧಾರ್ಮಿಕ ವಿದ್ಯಾಭ್ಯಾಸ ನಿರತರಾಗಿರುವ ವಿದ್ಯಾರ್ಥಿಗಳು (ಮುತ‌ಅಲ್ಲಿಮ್‌ಗಳು), ಸುನ್ನೀ ಸಮೂಹ‌ ಸಂಘಟನೆಗಳಾದ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ಎಸ್ಸೆಸ್ಸೆಫ್), ಸುನ್ನೀ ಯುವಜನ ಸಂಘ (ಎಸ್‌ವೈಎಸ್),‌ ಕರ್ನಾಟಕ ಮುಸ್ಲಿಂ ಜಮಾಅತ್ (ಕೆಎಮ್‌ಜೆ), ಸುನ್ನೀ‌ ಮೆನೇಜ್‌ಮೆಂಟ್ ಅಸೋಸಿಯೇಷನ್ (ಎಸ್‌ಎಮ್‌ಎ), ಸುನ್ನೀ‌ ಜಂ ಇಯ್ಯತುಲ್ ಉಲೆಮಾ (ಎಸ್‌ಜೆಯು), ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ (ಎಸ್‌ಜೆಎಮ್), ಅನಿವಾಸಿ ಭಾರತೀಯ ಸಂಘಟನೆ ಕರ್ನಾಟಕ ಕಲ್ಚರಲ್ ಪೌಂಡೇಷನ್(ಕೆಸಿಎಫ್) ಮೊದಲಾದ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸದಸ್ಯರೂ ಸೇರಿ 2 ಸಾವಿರಕ್ಕೂ ಮಿಕ್ಕಿದ ಜನ ಭಾಗವಹಿಸಲಿದ್ದಾರೆ. ಅತಿಥಿ ಸತ್ಕಾರದ ಭಾಗವಾಗಿ ಆಗಮಿಸಿದ ಎಲ್ಲರಿಗೂ ಲಘು ಉಪಾಹಾರ ಹಾಗೂ ಮಧ್ಯಾಹ್ನದ ಭೊಜನದ ವ್ಯವಸ್ಥೆ ಮಾಡಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸುನ್ನೀ ಕೋರ್ಡಿನೇಷನ್ ಕಮಿಟಿ ಅಧ್ಯಕ್ಷ ಸಯ್ಯಿದ್ ಸಾದಾತ್ ತಂಙಳ್, ಕಾರ್ಯಾಧ್ಯಕ್ಷ ಜಿ.ಕೆ ಉಮರ್ ಗುರುವಾಯನಕೆರೆ, ಕಾರ್ಯದರ್ಶಿ ಸಲೀಂ ಕನ್ಯಾಡಿ, ಕೋಶಾಧಿಕಾರಿ ಮುಹಮ್ಮದ್ ರಫಿ ಬೆಳ್ತಂಗಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here