ಕಲ್ಮಂಜ: ಕುಡಿಯುವ ನೀರು ಕಲ್ಪಿಸುವ ಮಹತ್ವಾಕಾಂಕ್ಷಿ ಉದ್ದೇಶದೊಂದಿಗೆ ಆರಂಭಗೊಂಡಿರುವ ಜಲ್ ಜೀವನ್ ಮಿಷನ್ನ (ಜೆಜೆಎಂ) ಯೋಜನೆ ಕಲ್ಮಂಜ ಗ್ರಾಮ ಪಂಚಾಯತ್ನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಕಾಣದೆ ಹಳ್ಳ ಹಿಡಿದಿದೆ. ಕಲ್ಮಂಜ ಗ್ರಾಮದ ಜನತೆ ಕಳೆದ ನಾಲ್ಕು ವರ್ಷಗಳಿಂದ ಕಾಯುತ್ತಿದ್ದರೂ ಮನೆ ಮನೆಗೆ ಗಂಗೆ ಇನ್ನೂ ತಲುಪದೇ ಇರುವುದು ಜನರಲ್ಲಿ ಅಸಮಾಧಾನ ಉಂಟು ಮಾಡಿದೆ.
ಕಲ್ಮಂಜ ಗ್ರಾಮದ ಮದಿಮಲ್ ಕಟ್ಟೆ ಅಂಗನವಾಡಿ ಎಂಬಲ್ಲಿ ಸಾರ್ವಜನಿಕರು ನೀರಿನ ಸಮಸ್ಯೆ ಎದುರಿಸುವ ಸಲುವಾಗಿ ಸಾರ್ವಜನಿಕ ಉಪಯೋಗಕ್ಕಾಗಿ ಅಂಗನವಾಡಿ ಪಕ್ಕ ಕಳೆದ ನಾಲ್ಕು ವರ್ಷಗಳಿಂದ ನೀರಿನ ಟ್ಯಾಂಕ್, ಕಾಮಗಾರಿ ನಡೆಯುತ್ತಲೇ ಇದೆ. ಇತ್ತೀಚಿಗೆ ಕಾಮಗಾರಿ ಮಾಡದೆ ಗಿಡ ಪೊದೆಗಳು ಆವರಿಸಿಕೊಂಡಿದೆ. ಇನ್ನು ಎಷ್ಟು ವರ್ಷ ಸಾರ್ವಜನಿಕರು ಇದರ ಉಪಯೋಗಕ್ಕಾಗಿ ಕಾಯಬೇಕಾಗಬಹುದು, ಇದಕ್ಕೆ ಸಂಬಂಧಪಟ್ಟವರು ಕೂಡಲೇ ಟ್ಯಾಂಕ್ ನ್ನು ಪೂರ್ಣಗೊಳಿಸುವಲ್ಲಿ ಕೆಲಸ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.