ಉಜಿರೆ: ಬೆಂಗಳೂರು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಬೆಳ್ತಂಗಡಿ ವಿಭಾಗದ ಕಾರ್ಯಕಾರಿ ಸಮಿತಿಯ ಸಭೆಯು ಉಜಿರೆಯ ಶಾರದಾ ಮಂಟಪದಲ್ಲಿ ಸೆ.19ರಂದು ನಡೆಯಿತು.
ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ರಾಜ್ಯ ಸಂಯೋಜಕ ಟಿ.ಜೆ. ಮೇಥ್ಯು ದ.ಕ. ಜಿಲ್ಲಾ ಗೌರವಾಧ್ಯಕ್ಷ ಡಾ.ಗೋಪಾಲಕೃಷ್ಣ ಕಾಂಚೋಡು, ದ.ಕ. ಜಿಲ್ಲಾಧ್ಯಕ್ಷ ನೋರ್ಬಟ್ ರೋಡ್ರಿಗಸ್ ಅವರ ನೇತೃತ್ವದಲ್ಲಿ ಜಿಲ್ಲಾ ಉಪಾಧ್ಯಕ್ಷ ರುಡಾಲ್ಫ್ ಡಿಸೋಜ, ಖಜಾಂಚಿ ಚಂದಪ್ಪ ಡಿ.ಎಸ್. ಕಡಬ, ತಾಲ್ಲೂಕು ಅಧ್ಯಕ್ಷ ಸೆಬಾಸ್ಟಿಯನ್, ಕಡಬದ ನಿಕಟಪೂರ್ವ ಅಧ್ಯಕ್ಷ ಸೈಮನ್ ಟಿ.ಜಿ. ಅವರ ಉಪಸ್ಥಿತಿಯಲ್ಲಿ ನಡೆಯಿತು.
ಸಭೆಯಲ್ಲಿ ಬೆಳ್ತಂಗಡಿ ತಾಲೂಕು ಘಟಕದ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಗೌರವಾಧ್ಯಕ್ಷರಾಗಿ ಎಮ್. ಜೆ. ಮಣಿ, ಅಧ್ಯಕ್ಷರಾಗಿ ಎನ್.ಪಿ. ತಂಗಚ್ಚನ್, ಉಪಾಧ್ಯಕ್ಷರಾಗಿ ರವಿ ಪ್ರಸಾದ್, ಕಾರ್ಯದರ್ಶಿಯಾಗಿ ಸುರೇಶ್ ಕುಮಾರ್ ಗೌಡ, ಜತೆ ಕಾರ್ಯದರ್ಶಿಯಾಗಿ ರಾಜೇಶ್, ಸಂಘಟನಾ ಕಾರ್ಯದರ್ಶಿಯಾಗಿ ಎನ್. ಸುರೇಶ್ ಭಟ್, ಖಜಾಂಚಿಯಾಗಿ ವಾಲ್ಟರ್ ಸಿಕ್ವೇರ, ಜತೆ ಖಜಾಂಚಿಯಾಗಿ ಪ್ರಾನ್ಸಿಸ್, ಪ್ರಧಾನ ಸಲಹೆಗಾರರಾಗಿ ಎ.ಕೆ. ಶಿವನ್ ಮತ್ತು ಮೋಹನ ಶೆಟ್ಟಿ ಮುದ್ದಿಗೆ, ಸಲಹೆಗಾರರಾಗಿ ಶಿವರಾಮ ಭಟ್ ಎಮ್.ಬಿ., ಪಿಂಟೊ, ಹರೀಶ್ ರೈ, ಕಾಂತಪ್ಪಗೌಡ, ವೆಂಕಟರಮಣ ಶರ್ಮ, ಕೃಷ್ಣಾನಂದ ಶೆಟ್ಟಿ ಹಾಗೂ ಚೆರಿಯನ್ ಥೋಮಸ್ ಅವರನ್ನು ಆಯ್ಕೆ ಮಾಡಲಾಯಿತು.