ವಾಣಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಯದುಪತಿ ಗೌಡರಿಗೆ ಗೌರವಾರ್ಪಣೆ- ಯುವ ವೇದಿಕೆ ಅಧ್ಯಕ್ಷ ಚಂದ್ರಕಾಂತ್ ನಿಡ್ಡಾಜೆ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭ

0

ಬೆಳ್ತಂಗಡಿ: ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ 21ವರ್ಷ ಪ್ರಾಂಶುಪಾಲರಾಗಿ ನಿಸ್ವಾರ್ಥ ಸೇವೆ ಸಲ್ಲಿಸಿ ನಿವೃತ್ತರಾದ ಡಿ. ಯದುಪತಿ ಗೌಡ ಇವರನ್ನು ಯುವ ವೇದಿಕೆ ಹಾಗೂ ಮಹಿಳಾ ವೇದಿಕೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಬೆಳ್ತಂಗಡಿ, ಸ್ಪಂದನಾ ಸೇವಾ ಸಂಘ ಬೆಳ್ತಂಗಡಿ ಮತ್ತು ಪ್ರಗತಿ ಸ್ವ -ಸಹಾಯ ಸಂಘ ಬೆಳ್ತಂಗಡಿ ಇದರ ಸಂಯುಕ್ತ ಆಶ್ರಯದಲ್ಲಿ ಗೌಡರ ಯಾನೆ ಒಕ್ಕಲಿಗರ ಸಮುದಾಯ ಭವನದಲ್ಲಿ ಯುವ ವೇದಿಕೆಯ ಅಧ್ಯಕ್ಷ ಚಂದ್ರಕಾಂತ ನಿಡ್ಡಾಜೆರವರ ಅಧ್ಯಕ್ಷತೆಯಲ್ಲಿ ಅಭಿನಂದಿಸಿ, ಸನ್ಮಾನಿಸಲಾಯಿತು.

ಈ ಸಂಧರ್ಭದಲ್ಲಿ ಯುವ ವೇದಿಕೆಯ ಸಲಹೆಗಾರ ಮೋಹನ ಗೌಡ ಕೊಯ್ಯೂರು, ಪ್ರಧಾನ ಕಾರ್ಯದರ್ಶಿ ಸುರೇಶ್ ಕೌಡಂಗೆ, ಕೋಶಾಧಿಕಾರಿ ರಂಜಿತ್ ಕಳೆಂಜ, ಜೊತೆ ಕಾರ್ಯದರ್ಶಿ ತೀಕ್ಷಿತ್ ದಿಡುಪೆ, ಉಪಾಧ್ಯಕ್ಷ ನಿತಿನ್ ಕಲ್ಮಂಜ, ಕಾನೂನು ಸಲಹೆಗಾರ ನವೀನ್ ನಿಡ್ಲೆ, ಸಂಘಟನಾ ಕಾರ್ಯದರ್ಶಿ ಪ್ರಮೋದ್ ದಿಡುಪೆ, ಯಶವಂತ ಡೆಚ್ಚಾರು, ಭರತ್ ಪುದುವೆಟ್ಟು, ಸತೀಶ್ ಬೆಳಾಲು, ಅಕ್ಷಯ್ ಉಜಿರೆ, ಪ್ರಸಾದ್ ಚಾರ್ಮಾಡಿ, ಮಂಜುನಾಥ ಚಾರ್ಮಾಡಿ, ಪ್ರದೀಪ್ ನಾಗಾಜೆ, ಸಚಿನ್ ಕನ್ಯಾಡಿ, ಶಿವಪ್ರಸಾದ್ ಕಲ್ಮಂಜ, ನಿತೇಶ್ ಬೆಳ್ತಂಗಡಿ, ಸೀತಾರಾಮ್ ಬೆಳಾಲು, ಧನಂಜಯ್ ಕುಮಾರ್ ಪೆರ್ಲ, ಮಹಿಳಾ ವೇದಿಕೆ ಅಧ್ಯಕ್ಷೆ ಗೀತಾರಾಮಣ್ಣ ಗೌಡ, ಕಾರ್ಯದರ್ಶಿ ಲೀಲಾ ಬೆಳಾಲು, ದಯಾಮಣಿ ಕೊಯ್ಯೂರು, ಮೀನಾಕ್ಷಿ ಮಹಾಬಲ ಗೌಡ ಕುವೆಟ್ಟು ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here