ಬೆಳ್ತಂಗಡಿ: ಪ್ರೇರಣಾ ಸೌಹಾರ್ದ ಸಹಕಾರಿಯ ವಾರ್ಷಿಕ ಮಹಾಸಭೆ-ಡಿವಿಡೆಂಡ್ 14%

0

ಬೆಳ್ತಂಗಡಿ: ಸಂತೆ ಕಟ್ಟೆ ರಾಜೀವ್ ಗಾಂಧಿ ವಾಣಿಜ್ಯ ಸಂಕೀರ್ಣದ ಮೊದಲ ಮಹಡಿಯಲ್ಲಿ ಕಾರ್ಯಾಚರಿಸುವ ಬೆಳ್ತಂಗಡಿ ಪ್ರೇರಣಾ ಸೌಹಾರ್ದ ಸಹಕಾರಿಯ ವಾರ್ಷಿಕ ಮಹಾಸಭೆಯು ಸೆ.20ರಂದು ಬೆಳ್ತಂಗಡಿ ಹೊಲಿ ರೀಡಿಮರ್ ಚರ್ಚ್ ಮಿನಿಹಾಲ್ ನಲ್ಲಿ ಸಂಘದ ಅಧ್ಯಕ್ಷ ಲ್ಯಾನ್ಸಿ ಎ.ಪಿರೇರಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಬೆಳ್ತಂಗಡಿ ಹೊಲಿ ರಿಡಿಮರ್ ಚರ್ಚ್ ಪ್ರಧಾನ ಧರ್ಮಗುರು ವಂ. ವಾಲ್ಟರ್ ಡಿಮೆಲ್ಲೊ ಆಶೀರ್ವಾಚನ ಗೈದರು.

ಸಂಘದಲ್ಲಿ ಒಟ್ಟು 714 ಸದಸ್ಯರಿದ್ದು, 17,95,500 ಬಂಡವಾಳ ಹೊಂದಿದೆ. ರೂ.5.83ಕೋಟಿ ಠೇವಣಿಯೊಂದಿಗೆ, ರೂ 3.49ಕೋಟಿ ಸಾಲ ವಿತರಿಸಿ ರೂ.23.77 ಕೋಟಿ ವ್ಯವಹಾರ ನಡೆಸಿದೆ. ಸದಸ್ಯರಿಗೆ ಶೇ.14 ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಲ್ಯಾನ್ಸಿ ಎ. ಪಿರೇರಾ ಘೋಷಿಸಿದರು. ಸಂಘದ ಉಪಾಧ್ಯಕ್ಷ ವಿಲ್ಸನ್ ಜೋರ್ಜ್ ಗೊನ್ಸಾಲ್ವಿಸ್, ನಿರ್ದೇಶಕರುಗಳಾದ ಜಾನ್ ಅರ್ವಿನ್ ಡಿ’ಸೋಜಾ, ಎಲೋಸಿಯಸ್ ಎಸ್.ಲೋಬೊ, ವಿನ್ಸೆಂಟ್ ಟಿ. ಡಿಸೋಜ, ಜಾನ್ ಆಲ್ವಿನ್ ಪಿಂಟೊ, ಬೆನೆಡಿಕ್ಟ್ ವೇಗಸ್, ಮ್ಯಾಕ್ಸಿಮ್ ಡಿಕೋಸ್ತಾ, ತಿಯೋಫಿಲಾ ಡಿಸೋಜ, ಸ್ಟೆಲ್ಲಾ ಫ್ರಾಂಕ್, ಸೆಲಿನ್ ನೊರೊನ್ಹಾ, ಉಪಸ್ಥಿತರಿದ್ದರು.

ಮುಖ್ಯಕಾರ್ಯನಿರ್ವಹಣಾಧಿಕಾರಿ ಐರಿನ್ ಡಿಸೋಜ ವಾರ್ಷಿಕ ವರದಿ ಮಂಡಿಸಿದರು. ಉಪಾಧ್ಯಕ್ಷ ವಿಲ್ಸನ್ ಗೊನ್ಸಾಲ್ವಿಸ್ ಸ್ವಾಗತಿಸಿದರು. ನಿರ್ದೇಶಕ ಜಾನ್ ಅರ್ವಿನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.
ಸಭೆಯಲ್ಲಿ ಲಕ್ಕಿ ಕೂಪನ್ ಡ್ರಾ ನಡೆಸಲಾಯಿತು.

LEAVE A REPLY

Please enter your comment!
Please enter your name here