ನೆರಿಯ: ಕಕ್ಕಿಂಜೆ ನೆರಿಯ ಮುಖ್ಯ ರಸ್ತೆಯ ಅಣಿಯೂರು ಕುಳೆನಾಡಿ ಎಂಬಲ್ಲಿ ತಿಂಗಳ ಹಿಂದೆ ನಿರಂತರವಾಗಿ ಸುರಿದ ಮಳೆಗೆ ಗಾಳಿಗೆ ಬಸ್ ಸ್ಟ್ಯಾಂಡ್ ಮೇಲೆ ಮರ ಬಿದ್ದು ಬಸ್ ಸ್ಟ್ಯಾಂಡ್
ಸಂಪೂರ್ಣ ಹಾನಿಯಾಗಿದೆ.
ಘಟನೆ ನಡೆದು ತಿಂಗಳು ಕಳೆದರೂ ಸಂಬಂಧಪಟ್ಟ ಸ್ಥಳೀಯ ಆಡಳಿತ ಗ್ರಾಮ ಪಂಚಾಯತ್ ಮರ ತೆರೆವುಗೊಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಸ್ಥಳೀಯ ಜನಪ್ರತಿನಿಧಿಗಳು ಅದೇ ರಸ್ತೆಯಲ್ಲಿ ತೆರಳಿದರೂ ಕೂಡ ಈ ಬಗ್ಗೆ ಗಮನಹರಿಸಿಲ್ಲ. ಇನ್ನು ಆದರೂ ಕೂಡ ಸಂಬಂಧಪಟ್ಟ ಸ್ಥಳೀಯ ಗ್ರಾಮ ಪಂಚಾಯತ್ ಮರ ತೆರೆವುಗೊಳಿಸಿ ಬಸ್ ಸ್ಟ್ಯಾಂಡಿನ ನಿರ್ಮಾಣ ಮಾಡುತ್ತಾ ಎಂಬುದು ಸಾರ್ವಜನಿಕ ಆಕ್ರೋಶವಾಗಿದೆ.