ಉಜಿರೆ: ಎಸ್.ಡಿ.ಎಂ. ಪಾಲಿಟೆಕ್ನಿಕ್ ನಲ್ಲಿ ಇಂಟರ್ ಪಾಲಿಟೆಕ್ನಿಕ್ ತಾಂತ್ರಿಕ ಸ್ಪರ್ಧೆ

0

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ನಲ್ಲಿ ಇಂಜಿನಿಯರ್ಸ್ ದಿನಾಚರಣೆಯ ಪ್ರಯುಕ್ತ ಟೆಕ್ ಟ್ರಿಕ್ಸ್ 2025 ಜಿಲ್ಲಾ ಮಟ್ಟದ ಇಂಟರ್ ಪಾಲಿಟೆಕ್ನಿಕ್ ಟೆಕ್ನಿಕಲ್ ಕಾಂಪಿಟೇಷನ್ ಸೆ. 15ರಂದು ನಡೆಯಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕುಕ್ಕೆ ಸುಬ್ರಹ್ಮಣ್ಯದ ಸ್ಪೆಷಲ್ ಸಬ್ ಡಿವಿಜನ್ ಅಸಿಸ್ಟೆಂಟ್ ಇಂಜಿನಿಯರ್ ಪ್ರಮೋದ್ ಕುಮಾರ್ ಕೆ. ಕೆ. ಉದ್ಘಾಟಿಸಿ ಮಾತನಾಡಿ ಇಂಜಿನಿಯರ್ ಕ್ಷೇತ್ರದಲ್ಲಿ ವಿಶ್ವೇಶ್ವರಯ್ಯರವರ ಸಾಧನೆ ಅಮೋಘ ಅದಕ್ಕಾಗಿ ಅವರ ಜನ್ಮ ದಿನವನ್ನು ಭಾರತ ದೇಶದಲ್ಲಿಮಾತ್ರ ಅಲ್ಲದೆ ಇತರ ಎರಡು ದೇಶದಲ್ಲಿ ಇಂಜಿನಿಯರ್ಸ್ ದಿನವಾಗಿ ಆಚರಣೆ ಮಾಡಲಾಗುತ್ತಿದೆ. ಅವರ ಸಾಧನೆ ಹಿಂದೆ ತತ್ವಗಳು ಸೇವಾ ರೀತಯಲ್ಲಿ ಮುಂದುವರಿದಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅವಕಾಶ ಸಿಕ್ಕಿದಾಗ ಯಾವುದೇ ಸ್ಪರ್ಧೆ ಗಳಲ್ಲಿ ಭಾಗವಹಿಸುವುದರಿಂದ ನಮ್ಮ ಬದುಕಿಗೆ ಪ್ರಯೋಜನ ಆಗುತ್ತದೆ. ಸಮಾಜದಲ್ಲಿ ಇಂಜಿನಿಯರ್ ಗಳ ಕೊಡುಗೆ ಅಪಾರ ಈಗಿನ ಸಂದರ್ಭಕ್ಕೆ ತಕ್ಕಂತೆ ಹೊಂದಿ ಕೊಂಡು ಟೆಕ್ನಿ ಕಲ್ ಸೇವೆ ಮಾಡಿದರೆ ಯಶಸ್ವಿ ಸಾಧಿಸಲು ಅವಕಾಶ ಇದೆ ಇದನ್ನು ವಿದ್ಯಾರ್ಥಿ ಜೀವನದಲ್ಲಿಯೇ ಅಳವಡಿಸಿ ಕೊಳ್ಳ ಬೇಕು ಎಂದರು.

ಪ್ರಾಂಶುಪಾಲ ಸಂತೋಷ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ ವಿಶ್ವೇಶ್ವರಯ್ಯ ರವರ ಜನ್ಮ ದಿನವನ್ನು ಪ್ರತಿ ವರ್ಷ ಸೆ. 15ರಂದು ಇಂಜಿನಿಯರ್ಸ್ ದಿನವಾಗಿ ಆಚರಣೆ ಮಾಡುತ್ತಾ ಬರುತ್ತಿದ್ದು ಮಹಾನ್ ವ್ಯಕ್ತಿ ಯಾದ ಅವರ ಜೀವನ ಚರಿತ್ರೆ, ಅವರ ಆದರ್ಶಗಳನ್ನು ತಿಳಿದಾಗ ವಿದ್ಯಾರ್ಥಿಗಳಿಗೆ ಸ್ಫೂರ್ತಿ ಸಿಗುವುದು. ವಿವಿಧ ವಿಭಾಗದಲ್ಲಿ ಸ್ಪರ್ಧೆ ಯನ್ನು ಆಯೋಜಿಸಲಾಗಿದ್ದು ಸ್ಪರ್ಧಾ ಮನೋಭಾವದೊಂದಿಗೆ ಭಾಗವಹಿಸ ಬೇಕು ಎಂದರು. ಪಾಲಿಟೆಕ್ನಿಕ್ ಮೆನೇಜರ್ ಚಂದ್ರನಾಥ ಜೈನ್, ವಿವಿಧ ವಿಭಾಗಗಳ ಮುಖ್ಯಸ್ಥರು ಗಳಾದ ಮೇರಿ ಸ್ಮಿತಾ, ದಿನೇಶ್, ಶ್ರೇಯಾಂಕ್ ಜೈನ್, ತೃಪ್ತಿ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇಂಗ್ಲೀಷ್ ಉಪನ್ಯಾಸಕ ಶಂಕರ ಭಟ್ ಸ್ವಾಗತಿಸಿದರು. ಸಂಪತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸ್ಪರ್ಧಿ ವಿದ್ಯಾರ್ಥಿಗಳು, ಉಪನ್ಯಾಸಕರು, ಸಿಬ್ಬಂದಿ ಹಾಜರಿದ್ದರು. ರೆನಿಟಾ ಫೆರ್ನಾಂಡೀಸ್ ವಂದಿಸಿದರು.

LEAVE A REPLY

Please enter your comment!
Please enter your name here