ದಿ. ರಾಮಚಂದ್ರ ಭಟ್ ಅವರಿಗೆ ಶ್ರದ್ಧಾಂಜಲಿ ಸಭೆ

0

ಬೆಳ್ತಂಗಡಿ: ಅಸೌಖ್ಯದಿಂದ ಆ.29ರಂದು ನಿಧನ ಹೊಂದಿದ್ದ ಕುತ್ತೂರು ರಾಮಚಂದ್ರ భటో ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ಸೆ.10 ರಂದು ಕುತ್ತೂರು ಮಂಜು ತ್ರಿ ಸಭಾಂಗಣದಲ್ಲಿ ನಡೆಯಿತು. ನಿವೃತ್ತ ಸೇನಾಧಿಕಾರಿ ರಾಘವೇಂದ್ರ ಭಟ್ ಮಾತನಾಡಿ ರಾಮಚಂದ್ರ ಭಟ್ ಅವರು ನಗುಮುಖದ ‘ವ್ಯಕ್ತಿ. ಕುತ್ತೂರು ಶಾಲೆಯನ್ನು ರಾಜ್ಯ ಮಟ್ಟಕ್ಕೆ, ರಾಷ್ಟ್ರಮಟ್ಟಕ್ಕೆ ತೆಗೆದುಕೊಂಡು ಹೋಗುವಲ್ಲಿ ಶ್ರಮಿಸಿದ್ದರು. ರಾಮಚಂದ್ರ ಭಟ್‌ರವರು ಊರಿಗಾಗಿ, ಸಾರ್ವಜನಿಕರಾಗಿ ಜೀವನವನ್ನು ಮುಡಿಪಾಗಿ ಇಟ್ಟು ಅವರು ಕುಟುಂಬಕ್ಕೆ ಏನನ್ನು ಮಾಡಲಿಲ್ಲ ಎಂದು ಹೇಳಿದರು. ಎಸ್. “ಕೆ.ಆರ್.ಡಿ.ಪಿ ಯೋಜನಾಧಿಕಾರಿ ಆಶೋಕ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ರಾಮಚಂದ್ರ ಭಟ್‌ ರವರ ಪತ್ನಿ ಪ್ರಮೀಳಾ, ಮಗಳು ಚಿನ್ಮಯಿ, ಮಗ ಚಿರಂಜೀವಿ, ವಕೀಲ ಮುರಳಿ ಬಲಿಪ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ, ನಾರಾವಿ ಪತ್ತಿನ ಸಹಕಾರಿ ಸಂಘದ ಮುಖ್ಯ ಗ್ರಾ.ಪಂ. ಅಧ್ಯಕ್ಷ ರಾಜವರ್ಮ, ಉಪಾಧ್ಯಕ್ಷ ಸುಮಿತ್ರ, ಸೂರ್ಯನಾರಾಯಣ ದೇವಸ್ಥಾನ ಸಮಿತಿಯ ಅಧ್ಯಕ್ಷ ರವೀಂದ್ರ ಪೂಜಾರಿ ಮತ್ತು ಸದಸ್ಯರು, ಜಿಲ್ಲಾ ಬಿಜೆಪಿ ಮಂಡಲದ ಉಪಾಧ್ಯಕ್ಷ ಜಯಂತ್ ಕೋಟ್ಯಾನ್, ಕುತ್ತೂರು ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಶಶಿಕಾಂತ್ ಆರಿಗ, ಕುತ್ತೂರು ಶಾಲೆಯ ಮುಖ್ಯೋಪಾದ್ಯಾಯ ಜ್ಯೋತಿ ಮತ್ತು ಶಿಕ್ಷಕರು, ನಾರಾವಿ ಕೊಡಮಣಿತ್ತಾಯ ದೇವಸ್ಥಾನದ ಅಧ್ಯಕ್ಷ ಪ್ರಭಾಕರ್, ನಾರಾವಿ ಪ್ರಾಥಮಿಕ ಕೃವಿ ಕಾರ್ಯನಿರ್ವಹಣಾಧಿಕಾರಿ ಶಶಿಕಾಂತ್ ಜೈನ್, ವಿಶಾಲಕ್ಷಿ, ನಾರಾವಿ ಪಿಡಿಒ ಸುಧಾಕರ್ ಡಿ, ನಾರಾವಿ ಮಾಜಿ ಗ್ರಾ.ಪಂ ಅಧ್ಯಕ್ಷ ಆಶಾಲತಾ, ಸತೀಶ್ ಪಡಿವಾಳ್ ಹುದೆಂಬೊಟ್ಟು, ಡಾಕಯ್ಯ ಪೂಜಾರಿ ಸಮೃದ್ಧಿ, ಕನಕ ವರ್ಮ ಜೈನ್ ಅಧ್ಯಕ್ಷರು SDMC ಸರಕಾರಿ ಉನ್ನತೀಕರಿಸಿದ ಹಿ.ಪ್ರಾ.ಶಾಲೆ ಕುತೂರು, ಸಂಜೀವ ಪೂಜಾರಿ, ಪವನ್ ಡೆಕೋರೇಟರ್, ಶಿವಣ್ಣ ಶೆಟ್ಟಿ ವಿಶ್ಲೇಶ್ವರ ಇಂಡಸ್ಟ್ರೀಸ್, ಆನಂದ ಸಾಲಿಯಾನ್ ಕಾರ್ಯದರ್ಶಿಗಳು ಹಾ.ಉತ್ಪಾದಕರ ಸಹಕಾರಿ ಸಂಘ ಕುತ್ತೂರು, ಶ್ವೇತಾ ಜಗದೀಶ್ ಉಪಾಧ್ಯಕ್ಷರು SDMC ಸ.ಉ.ಹಿ.ಪ್ರಾ.ಶಾಲೆ ಕುತ್ತೂರು, ರವಿಪ್ರಸಾದ್ ಗೋಕುಲ ಕಾರ್ಯದರ್ಶಿಗಳು ಮಂಜುಶ್ರೀ ಭಜನಾ ಮಂಡಳಿ ಕುತ್ತೂರು, ಯಶೋಧಾ ನಿತ್ಯಾನಂದ ನಿರ್ದೇಶಕರು ನಾರಾವಿ ಕೃಷಿ ಪತ್ತಿನ ಸಹಕಾರ ಸಂಘ, ಉಮೇಶ್ ಪೂಜಾರಿ ಸಣ್ಣ ಬಡೆಕ್ಕಲ, ಹರ್ಷಿತ್ ಸುವರ್ಣ ಎಲೆಕ್ಟಿಕಲ್ಸ್ ಜಂತಿಗೋಳಿ ಕೊಕ್ರಾಡಿ, ನಿಮಿತ್ ಕುಮಾರ್ ಚೈನ್, ಅಧ್ಯಕ್ಷರು, ಹಳೆ ವಿದ್ಯಾರ್ಥಿ ಸಂಘ, ಅಭಿಜಿತ್ ಜೈನ್, ಯಕ್ಷಗಾನ ಕಲಾವಿದರು ಕುತ್ತೂರು, ಮಮತಾ ಜೈನ್ ಮತ್ತು ಮಕ್ಕಳು ಶಾಂತಿ ನಿಲಯ ಕುತ್ತೂರು, ಶಿವರಾಜ್ ಅಂಚನ್, ಶ್ರೀದೇವಿ ಪ್ರಸಾದ್ ಬಜಿಲಪಾದೆ, ತುಂಗಪ್ಪ ಪೂಜಾರಿ ಮರ್ದೊಟ್ಟು ಮತ್ತಿತರರು ಉಪಸ್ಥಿತರಿದ್ದರು. ವೇಣೂರು ಐಟಿಐ ಕಾಲೇಜಿನ ಕಿರಿಯ ತರಬೇತಿ ಅಧಿಕಾರಿ ಸತೀಶ್ ನಿರೂಪಿಸಿದರು.

LEAVE A REPLY

Please enter your comment!
Please enter your name here