


ಮಡಂತ್ಯಾರು: ಗ್ರಾಮ ಪಂಚಾಯತ್ ನ 2024-25ನೇ ಸಾಲಿನ ಮೊದಲ ಸುತ್ತಿನ ಗ್ರಾಮ ಸಭೆಯು ಸೆ.11ರಂದು ಗ್ರಾಮ ಪಂಚಾಯತ್ ಸಮುದಾಯ ಭವನದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೂಪ ಅವರ ಅಧ್ಯಕ್ಷತೆಯಲ್ಲಿ ಜರಗಿತು. ನೋಡೆಲ್ ಅಧಿಕಾರಿಯಾಗಿ ಪಶು ಸಂಗೋಪನಾ ಇಲಾಖೆಯ ಡಾ. ವಿನಯ್ ಅವರು ವಹಿಸಿ ಸಭೆಯನ್ನು ಮುನ್ನಡೆಸಿದರು. ಉಪಾಧ್ಯಕ್ಷ ಗೋಪಾಲಕೃಷ್ಣ ಕೆ., ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೆ. ಪರಮೇಶ್ವರ, ಸದಸ್ಯರುಗಳಾದ ಕಿಶೋರ್ ಕುಮಾರ್ ಶೆಟ್ಟಿ, ಸಂಗೀತಾ, ಆಗ್ನೆಸ್ ಮೋನಿಸ್, ಮೋಹಿನಿ, ಹರಿಪ್ರಸಾದ್, ಉಮೇಶ್ ಸುವರ್ಣ, ಹನೀಫ್, ಸಾರಸನಾಫ್, ಪಾರ್ವತಿ, ಶೈಲೇಶ್ ಕುಮಾರ್, ರಾಜೀವ, ಶಿಲಾವತಿ, ಇಲಾಖಾ ಅಧಿಕಾರಿಗಳು, ಅಂಗನವಾಡಿ, ಆಶಾ ಕಾರ್ಯತೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಶೈಲೇಶ್ ಕುಮಾರ್ ಸ್ವಾಗತಿಸಿದರು. ಅಭಿವೃದ್ದಿ ಅಧಿಕಾರಿ ಪರಮೇಶ್ವರ ವರದಿ ಹಾಗು ಲೆಕ್ಕ ಪತ್ರ ಮಂಡಿಸಿದರು. ಉಪಾಧ್ಯಕ್ಷ ಗೋಪಾಲಕೃಷ್ಣ ಕೆ. ಕಾರ್ಯಕ್ರಮ ನಿರೂಪಿಸಿದರು. ಪಾರೆಂಕಿ ಗ್ರಾಮದ ಹುಪ್ಪದಲ್ಲಿರುವ 3ಜನರ 94c ಅರ್ಜಿದಾರರ ಮನೆ ಅರಣ್ಯದಲ್ಲಿ ಇದೆ ಎಂದು ಕಳೆದ ಮುರುವರೆ ವರ್ಷ ದಿಂದ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಅಬ್ದುಲ್ ರಹಿಮಾನ್ ಪಡ್ಪು ಅರಣ್ಯ ಅಧಿಕಾರಿಗಳ ಗಮನಕ್ಕೆ ತಂದರು. ಅರಣ್ಯ ಪ್ರದೇಶಗಳಲ್ಲಿ ಹಣ್ಣು ಹಂಪಲು ಗಿಡಗಳನ್ನು ನೆಟ್ಟು ಕಾಡುಪ್ರಾಣಿಗಳ ಹಾವಳಿ ತಪ್ಪಿಸಲು ರಿಚರ್ಡ್ ರೊಡ್ರಿಗಸ್ ಮನವಿ ಮಾಡಿದರು.

ಮಡಂತ್ಯಾರು ಗ್ರಾಮಕರಣಿಕರ ಕಚೇರಿಗೆ ಹೋಗುವ ದಾರಿ ಸರಿ ಇಲ್ಲ ಸರಿ ಪಡಿಸುವಂತೆ ಮತ್ತು ಕಟ್ಟಡ ಸರಿ ಇಲ್ಲ ಸರಿಯಾದ ಕಟ್ಟಡ ನಿರ್ಮಾಣ ಮಾಡಬೇಕು ಅದಕ್ಕೆ ಬೇಕಾದ ಸ್ಕೆಚ್, ಪ್ಲ್ಯಾನ್ ಮಾಡಿ ಗ್ರಾಮ ಪಂಚಾಯತ್ ಆಡಳಿತ ಮಂಡಳಿಗೆ ಕೊಡಿ ಗ್ರಾಮ ಪಂಚಾಯತ್ ಹಾಗೂ ಸಾರ್ವಜನಿಕರು ಸಹಕಾರ ನೀಡುತ್ತಾರೆ ಎಂದು ರಿಚರ್ಡ್ ರೊಡ್ರಿಗಸ್ ತಿಳಿಸಿದಾಗ ಈ ಇಂದಿನ ಆಡಳಿತ ಮಂಡಳಿ ಎಲ್ಲ ವ್ಯವಸ್ಥೆ ಮಾಡಲು ಹೋದಾಗ ಗ್ರಾಮ ಕರಣಿಕರ ಕಟ್ಟಡ ಉಸಾಬರಿ ನಿಮಗೆ ಬೇಡ ಎಂದು ಹಿಂದಿನ ತಹಸೀಲ್ದಾರ್ ಹೇಳಿದ್ದಾರೆ ಎಂದು ಉಪಾಧ್ಯಕ್ಷರು ಗೋಪಾಲಕೃಷ್ಣ ಕೆ. ಸಭೆಯ ಗಮನಕ್ಕೆ ತಂದರು.


ಮಕ್ಕಳಿಗೆ ಸ್ಕಾಲರ್ ಶಿಪ್ ಬರುತ್ತೆ ಬರುತ್ತೆ ಅಂತ ಅರ್ಜಿ ಹಾಕಿಸ್ತೀರಿ ಆದರೆ ಸ್ಕಲಾರ್ಷಿಪ್ ಬರುವುದೇ ಇಲ್ಲ, ಮಕ್ಕಳ ಸುರಕ್ಷೆ ಬಗ್ಗೆ ಹೇಳ್ತಿರಿ, ಶಾಲಾ ಮಕ್ಕಳನ್ನು ಆಟೋ, ಟೆಂಪೋ, ವ್ಯಾನ್ ನಲ್ಲಿ ತುಂಬಿಸಿಕೊಂಡು ಹೋಗ್ತಾರೆ ಇದರ ಬಗ್ಗೆ ಏನೂ ಕ್ರಮ ಕೈಗೊಂಡಿದ್ದೀರಿ ಎಂದು ಗ್ರಾಮಸ್ಥರು ಶಿಕ್ಷಣ ಅಧಿಕಾರಿಯವರ ಗಮನಕ್ಕೆ ತಂದರು. ಮಕ್ಕಳಿಗೆ ಶಿಕ್ಷಕರು ವಿದ್ಯಾಭ್ಯಾಸ ಬಗ್ಗೆ ಒತ್ತಡ ಹಾಕ್ತಾರೆ. ಪುಂಜಾಲಕಟ್ಟೆ ಕೆ.ಪಿ.ಎಸ್.ಸಿ ಶಾಲೆಯಿಂದ ಶಿಕ್ಷಕರ ವರ್ಗಾವಣೆ ಮಾಡಿದ್ದು ತಪ್ಪು, ಅತಿಥಿ ಶಿಕ್ಷಕರ ಬಿಟ್ಟು ಪೂರ್ಣಕಾಲಿಕ ಶಿಕ್ಷಕರ ನೇಮಕ ಮಾಡುವಂತೆ, ಮುಖ್ಯ ಶಿಕ್ಷಕರು ಇಲ್ಲದೆ ಹಲವಾರು ವರ್ಷವಾಗಿದೆ.
ಶಾಲಾ ಪೀಸ್, ಮೊಟ್ಟೆ ಖರೀದಿಗೆ ಹೆಚ್ಚುವರಿ ಹಣ ಪಡೆಯುತ್ತಾರೆ ಎಂದು ಗ್ರಾಮಸ್ಥರು ಅಧಿಕಾರಿಗಳ ಗಮನಕ್ಕೆ ತಂದರು. ಮಡಂತ್ಯಾರು ರಕ್ತೇಶ್ವರಿಪದವು ರಸ್ತೆ ತೀವ್ರಕೆಟ್ಟು ಹೋಗಿದ್ದರಿಂದ ದುರಸ್ಥಿ ಮಾಡುವಂತೆ ವಿನಂತಿಸಿದಾಗ ಅಧಿಕಾರಿ ಮಾತನಾಡಿ ಮಳೆ ಹಾನಿಯಿಂದ ಎಸ್ಟಿಮೇಟ್ ಮಾಡಲಾಗಿದೆ. ಅನುದಾನ ಬಂದ ಕೂಡಲೇ ರಿಪೇರಿ ಮಾಡಲಾಗುವುದು ಎಂದರು. ಕೆಂಪು ಕಲ್ಲು ಮರಳು ಸಮಸ್ಯೆ ತಲೆ ದೊರಿದೆ ಕೂಡಲೆ ಸಮಸ್ಯೆ ಬಗೆ ಹರಿಸುವಂತೆ ಸರಕಾರಕ್ಕೆ ನಿರ್ಣಯ ಮಾಡಿ ಕಳುಹಿಸುವಂತೆ ಗ್ರಾಮಸ್ಥರು ಆಡಳಿತ ಮಂಡಳಿಯಲ್ಲಿ ಮನವಿ ಮಾಡಿದರು.ಮೆಸ್ಕಾಂ ಬಿಲ್ಲ್ನಲ್ಲಿ ಹೆಚ್ಚುವರಿ ಬಿಲ್ಲ್ ಬಂದಿರುತ್ತದೆ ಎಂದು ಅಧಿಕಾರಿ ಗಮನಕ್ಕೆ ತಂದಾಗ ಅದು ಸೆಕ್ಯೂರಿಟಿ ಡೆಪಾಸಿಟ್ ಮಾಡಲು ಬಂದಿದೆ ಎಂದು ಮೆಸ್ಕಾಂ ಅಧಿಕಾರಿ ತಿಳಿಸಿದರು. ಮಾರಿಗುಡಿ ಹೊಸಮನೆ ಹಳೆ ತಂತಿ ಬದಲಾಹಿಸುವಂತೆ ವಿನಂತಿಸಿದರು.ಮಡಂತ್ಯಾರು ಉಪ್ಪಿನಂಗಡಿ ರಸ್ತೆ ಯಲ್ಲಿ ವಾಹನ ಗಳು ಇತಿ ಮಿತಿ ಇಲ್ಲದೆ ಚಲಾಹಿಸುತ್ತಾರೆ ಅದಕ್ಕೆ ಪೊಲೀಸ್ ಇಲಾಖೆ ಕಡಿವಾಣ ಹಾಕಬೇಕು ಎಂದು ಗ್ರಾಮಸ್ಥರು ದೂರಿದರು.
ಆಯುಷ್ಮಾನ್ ಕಾರ್ಡ್: ಆಯುಷ್ಮಾನ್ ಕಾರ್ಡ್ ಹೊಂದಿದ ಬಿಪಿಎಲ್ ಕಾರ್ಡ್ ದಾರರಿಗೆ 5ಲಕ್ಷ, ಎಪಿಎಲ್ ಕಾರ್ಡ್ ದಾರರಿಗೆ 1.50ಲಕ್ಷವರೆಗೆ ಸೌಲಭ್ಯ, 70ವರ್ಷ ಮೇಲ್ಪಟ್ಟ ಎಲ್ಲಾರಿಗೂ 5ಲಕ್ಷ ವರೆಗೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಉಚಿತವಾಗಿರುತ್ತದೆ. ಎಲ್ಲ ಚಿಕಿತ್ಸೆಗೆ ಸರಕಾರಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಲಭ್ಯವಿರುತ್ತದೆ. ಲಭ್ಯ ವಿರದ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಿಗೆ ತೆರಳಲು ಸೂಚನೆ ನೀಡಲಾಗುತ್ತದೆ. ತುರ್ತು ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಲ್ಲಿ ಆಯುಷ್ಮಾನ್ ಸೌಲಭ್ಯ ದೊರೆಯುತ್ತದೆ ಎಂದು ಆಯುಷ್ಮಾನ್ ಅಧಿಕಾರಿ ಮಾಹಿತಿ ನೀಡಿದರು.









